ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯ ನಿರಂತರ...

The work of passing it on to the next generation continues...
Published on

ಇಳಕಲ್ಲ.(ಗ್ರಾ):ಕನ್ನಡ ಭಾಷೆಯ ಮೌಲ್ಯ, ಅದಕ್ಕಿರುವ ಇತಿಹಾಸ, ಸಂಸತಿ ಮುಂದಿನ ಪೀಳಿಗೆ ಜನರಿಗೆ ಪರಿಣಾಮಕಾರಿ ತಲುಪಿಸಲು ಅಕಾಡೆಮಿ ನಿರಂತರವಾಗಿ ಶ್ರಮಿಸುತ್ತಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯ ಎಲ್​.ಎನ್​.ಮುಕುಂದರಾಜ ಹೇಳಿದರು.ಇಳಕಲ್ಲ ನಗರದ ಎಸ್​ ಆರ್​ ಕಂಠಿ ಶಿಣ ಮಹಾವಿದ್ಯಾಲಯದಲ್ಲಿ ಶುಕ್ರವಾರ ಕರ್ನಾಟಕ ಸಾಹಿತ್ಯ ಅಕಾಡೆಮಿ, ಬಾಗಲಕೋಟೆಯ ಚಕೋರಿ ವೇದಿಕೆ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿದರು.

ಆಯಾ ತಿಂಗಳಲ್ಲಿ ಬರುವ ಪ್ರಮುಖ ಟನೆಗಳು ಮತ್ತು ಸಾಹಿತ್ಯಿಕ, ರಾಷ್ಟ್ರಪ್ರೇಮ ವ್ಯಕ್ತಿಗಳ ಬಗ್ಗೆ ಎಲ್ಲ ಜಿಲ್ಲೆಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು, ವಿಜಯಪುರದಲ್ಲಿ ಕಾರಾಗೃಹ ಬಂಧಿಗಳಿಗಾಗಿ ವಿಚಾರ ಸಂಕಿರಣ ನಡೆಸಲಾಗಿದೆ. ಬೂಕರ್​ ಪ್ರಶಸ್ತಿ ದೇಶದಲ್ಲಿ ಮೊದಲು ಕನ್ನಡಕ್ಕೆ ಸಿಕ್ಕಿರುವುದು ನೆಮ್ಮೆಲ್ಲರ ಹೆಮ್ಮೆಯ ಸಂಗತಿ ಎಂದು ಹೇಳಿದರು.

ಸಾಹಿತಿ ವಿಶ್ವನಾಥ ವಂಶಾಕೃತಮಠ ಮಾತನಾಡಿ, ನಮ್ಮ ಜಿಲ್ಲೆಯಲ್ಲಿ ಸ್ವಾತಂತ್ರ ಹೋರಾಟಗಾರರ ಕೊಡುಗೆ ಅಪಾರವಾಗಿದೆ. ಇಮ್ಮಡಿ ಪುಲಿಕೇಶಿಯಿಂದ ಹಿಡಿದು ಹಿರಿಯ ಪತ್ರಕರ್ತರಾದ ಮೋರೆ ಹನಮಂತರಾಯರವರೆಗೂ ನಡೆದ ಹೋರಾಟ ಅವಿಸ್ಮರಣೀಯವಾಗಿದೆ ಎಂದು ವಿವರಿಸಿದರು.ಇಳಕಲ್ಲ ಗುರುಮಹಾಂತ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ವಿಜಯಪುರದ ಮೋಹನ ಕಟ್ಟಿಮನಿ, ನಾಟಕ ಅಕಾಡೆಮಿ ಸದಸ್ಯ ಕೆ.ಎ.ಬನ್ನಟ್ಟಿ, ಇಳಕಲ್ಲ ಕಸಾಪ ಅಧ್ಯ ಮಹಾದೇವ ಕಂಬಾಗಿ, ಡಾ.ರಾಖಿ ಪಡ್ನೇಕರ, ಧುತ್ತರಗಿ ಪ್ರತಿಷ್ಠಾನದ ಅಧ್ಯ ಎಸ್​.ಕೆ.ಕೊನೆಸಾಗರ, ಎಸ್​ವಿಎಂ ಕಾಲೇಜಿನ ಚೇರ್ಮೆನ್​ ಕಿರಣ ಬಿಜ್ಜಳ ಸೇರಿದಂತೆ ಇದ್ದರು. ಶ್ರೀಕಾಂತ ಚಿತ್ತರಗಿ ಸ್ವಾಗತಿಸಿದರು. ಮಹಾದೇವ ಬಸರಕೋಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಸರೋಜಾ ಗುಡದೂರ ವಂದಿಸಿದರು. ಶಂಕರಮ್ಮ ಕೊಪ್ಪರದ ನಿರೂಪಿಸಿದರು.

ಇಳಕಲ್ಲದ ಎಸ್​.ಆರ್​.ಕಂಠಿ ಶಿಣ ಮಹಾವಿದ್ಯಾಲಯದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ, ಬಾಗಲಕೋಟೆ ಚಕೋರಿ ವೇದಿಕೆ ಹಮ್ಮಿಕೊಂಡ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯ ಎಲ್​.ಎನ್​.ಮುಕುಂದರಾಜ ಮಾತನಾಡಿದರು. ಗುರುಮಹಾಂತಶ್ರೀಗಳು, ವಿಶ್ವನಾಥ ವಂಶಾಕೃತಮಠ, ಮೋಹನ ಕಟ್ಟಿಮನಿ, ಕಿರಣ ಬಿಜ್ಜಳ, ಮಹಾದೇವ ಬಸರಕೋಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net