‘ನಮ್ಮ ದಿನಕರ’ ಕೃತಿ ಅಮೂಲ್ಯವಾದುದು

kruti
Published on

ಅಂಕೋಲಾ: ಅಕ್ಷರ ಸೂರ್ಯನಾಗಿ ಉದಯಿಸಿದ ಡಾ. ದಿನಕರ ದೇಸಾಯಿ ಅವರನ್ನು ಸ್ಮರಿಸುವ ಜತೆಗೆ ಯುವ ಸಮುದಾಯಕ್ಕೆ ಪ್ರೇರಣೆ ನೀಡುವ ನಿಟ್ಟಿನಲ್ಲಿ ವಿಠ್ಠಲ ಗಾಂವಕರ ರಚಿಸಿರುವ ಕೃತಿ ಅತ್ಯಮೂಲ್ಯವಾಗಿದೆ ಎಂದು ಹಿರಿಯ ಸಾಹಿತಿ ಶಾಂತಾರಾಮ ನಾಯಕ ಹಿಚ್ಕಡ ಹೇಳಿದರು.

ಬಾರ್ಡೋಲಿ ಪ್ರತಿಷ್ಠಾನ ಅಂಕೋಲಾ ಮತ್ತು ಜಿ.ಸಿ. ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಸಾಹಿತಿ ವಿಠ್ಠಲ ಗಾಂವಕರ ಅವರ ನಮ್ಮ ದಿನಕರ ಕೃತಿಯನ್ನು ಶನಿವಾರ ಬಿಡುಗಡೆಗೊಳಿಸಿ ಮಾತನಾಡಿದರು.

ಕೃತಿ ಪರಿಚಯಿಸಿದ ಶಿಕ್ಷಕ ಬಾಲಚಂದ್ರ ನಾಯಕ ಭಾವಿಕೇರಿ ಮಾತನಾಡಿ, ಸಾಹಿತ್ಯ ವಲಯದಲ್ಲಿ ಹೊಸ ಅಲೆ ಸೃಷ್ಟಿಸಿದ ವಿಠ್ಠಲ ಗಾಂವಕರ ಅವರ 37ನೇ ಕೃತಿಯಾಗಿರುವ ನಮ್ಮ ದಿನಕರ ದಲ್ಲಿ ಸಾತ್ವಿಕ ವಿಚಾರಧಾರೆಗಳು ಸಮಾಜದ ಬೆಳವಣಿಗೆಗೆ ಪೂಕರವಾಗಿವೆ ಎಂದ ರು. ಜಿ.ಸಿ. ಪಿಯು ಕಾಲೇಜಿನ ಪ್ರಾಚಾರ್ಯೆ ಸುಜಾತಾ ಲಾಡ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಸಾಪ ತಾಲೂಕಾಧ್ಯಕ್ಷ ಗೋಪಾಲಕೃಷ್ಣ ನಾಯಕ, ಕರ್ನಾಟಕ ಸಂಘದ ಉಪಾಧ್ಯಕ್ಷೆ ಹೊನ್ನಮ್ಮ ನಾಯಕ, ಜಿ.ಸಿ.ಕಾಲೇಜಿನ ಧರ್ಮದಶಿ ಡಾ. ವಿ.ಎನ್. ನಾಯಕ ಉಪಸ್ಥಿತರಿದ್ದರು. ಕೃತಿಕಾರ ವಿಠ್ಠಲ ಗಾಂವಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಹಿತಿ ಜಿ.ಆರ್. ನಾಯಕ ಪ್ರಾರ್ಥಿಸಿದರು, ಲೇಖಕ ಮಹಾಂತೇಶ ರೇವಡಿ, ಸಾಹಿತಿ ಜೆ. ಪ್ರೇಮಾನಂದ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net