ಮಹಾಮಂಡಳದ ಕಾರ್ಯ ಶ್ಲಾಘನೀಯ

h11-Gajanan Mandal 2
Published on

ಹುಬ್ಬಳ್ಳಿ: ಹುಬ್ಬಳ್ಳಿ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳ ಮಹಾಮಂಡಳವು ಪ್ರತಿ ವರ್ಷ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಅದರಲ್ಲೂ ಸಾಧಕರನ್ನು ಹುಡುಕಿ ಸನ್ಮಾನಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಮೂರುಸಾವಿರಮಠದ ಶ್ರೀ ಗುರುಸಿದ್ದರಾಜಯೋಗೀಂದ್ರ ಸ್ವಾಮೀಜಿ ಬಣ್ಣಿಸಿದರು.
ಹುಬ್ಬಳ್ಳಿ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳ ಮಹಾಮಂಡಳ ವತಿಯಿಂದ ನಗರದ ಮೂರುಸಾವಿರ ಮಠದ ಸಭಾ ಭವನದಲ್ಲಿ ಬುಧವಾರ ಏರ್ಪಡಿಸಿದ್ದ ಬಹುಮಾನ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿ ಕ್ಷೇತ್ರದಲ್ಲಿಯೂ ಸಾಧಕರಿದ್ದಾರೆ. ಅವರನ್ನು ಹುಡುಕಿ ಪ್ರೋತ್ಸಾಹಿಸುವುದರಿಂದ ಸಮಸಮಾಜ ನಿರ್ಮಾಣವಾಗಲಿದೆ. ಅಲ್ಲದೇ ಪ್ರೋತ್ಸಾಹ ಸಿಕ್ಕಂತೆಯೂ ಆಗಲಿದೆ. ಸಾಮಾಜಿಕ, ಧಾರ್ಮಿಕ ಕ್ಷೇತ್ರದ ಸಂಗಮ ಸಾಧ್ಯವಾಗಲಿದೆ ಎಂದರು.
ಮಹಾಮಂಡಳದ ಅಧ್ಯಕ್ಷ ಮೋಹನ ಲಿಂಬಿಕಾಯಿ ಪ್ರಾಸ್ತಾವಿಕವಾಗಿ ಮಾತನಾಡಿ, ನಾವು ಮಾಡುವ ಪ್ರತಿಯೊಂದು ಕಾರ್ಯಕ್ರಮಕ್ಕೆ ಮೂರುಸಾವಿರ ಮಠ ಆಶ್ರಯ ನೀಡುತ್ತಿದೆ. ಸ್ವಾಮೀಜಿಗಳು ಎಲ್ಲದಕ್ಕೂ ಸಹಕಾರ ನೀಡುತ್ತಿದ್ದಾರೆ. ಬೇರೆ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸುವುದರಿಂದ ಸಾರ್ಥಕವೆನಿಸುತ್ತದೆ ಎಂದರು.
ನಾಟ್ಯಾಂಜಲಿ ಕಲಾತಂಡದ ವಿದ್ಯಾರ್ಥಿಗಳು ನೃತ್ಯ ಪ್ರಸ್ತುತಪಡಿಸಿದರು. ಯೋಗ ಪ್ರವೀಣೆ ಪ್ರೀತಿ ಹಡಗಲಿ ಯೋಗ ಪ್ರದರ್ಶನ ನೀಡಿದರು. ಮಣ್ಣಿನ ಕಲಾತ್ಮಕ ಗಣಪತಿ ಮೂರ್ತಿಗಳು ಹಾಗೂ ಕಲಾವಿದರು, ಸಮಾನ ವೇದಿಕೆ ಅಲಂಕಾರ, ಸಮಾನ ವಿದ್ಯುತ್ ಅಲಂಕಾರ, ಪ್ರೋತ್ಸಾಹಕ, ಸಮಾನ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವಿವಿಧ ಸಮಿತಿಗಳು ಬಹುಮಾನ ಪಡೆದವು.
ನರರೋಗ ತಜ್ಞ ಡಾ. ವಿಜಯಮಹಾಂತೇಶ ಪೂಜಾರ, ಸೇವಾ ಭಾರತಿ ಟ್ರಸ್ಟ್ ಕಾರ್ಯದರ್ಶಿ ಡಾ. ರಘು ಅಕಮಂಚಿ, ಭಾವೈಕ್ಯತೆ ಸೇವೆ ಕ್ಷೇತ್ರದ ಕಾಂತೇಶ ಗಂಟೆಪ್ಪನವರ, ಸಂಸ್ಕೃತಿ ಮತ್ತು ಸಾಹಿತ್ಯಕ್ಷೇತ್ರದ ಧರಣೇಂದ್ರ ಜವಳಿ, ಪ್ರಗತಿಪರ ರೈತ ದಿವಾನ್‌ಸಾಬ್ ನದಾಫ್, ಉದ್ಯಮಿ ವೆಂಕಟೇಶ ಎ. ಕಾಟವೆ, ನಾವಿನ್ಯತಾ ರಾಷ್ಟ್ರೀಯ ಪುರಸ್ಕಾರ ಪಡೆದ ಸುಧಾ ಹಾದಿಮನಿ (ಶೀಲವಂತರ) ಅವರನ್ನು ಸನ್ಮಾನಿಸಲಾಯಿತು.
ಉದ್ಯಮಿಗಳಾದ ಶಿವಯೋಗಿ ಗಡ್ಡದೇವರಮಠ, ಶಂಕರ ಕೋಳಿವಾಡ, ಮಹಾಮಂಡಳದ ಉಪಾಧ್ಯಕ್ಷರಾದ ಅಲ್ತಾಫ್ ಕಿತ್ತೂರ, ಶಾಂತರಾಜ ಪೋಳ, ಕಾರ್ಯದರ್ಶಿ ಅಮರೇಶ ಹಿಪ್ಪರಗಿ, ಪ್ರಮುಖರಾದ ಎಸ್.ಎಸ್. ಕಮಡೊಳ್ಳಿಶೆಟ್ಟರ್, ಅಶೋಕ ಬೆಳ್ಳಿಗಟ್ಟಿ, ಅನಿಲ್ ಕವಿಶೆಟ್ಟಿ, ಅನಿಲ ಬೇವಿನಕಟ್ಟಿ, ಚನ್ನಬಸಪ್ಪ ಧಾರವಾಡಶೆಟ್ಟರ್, ಅನಿತಾ ಜಡಿ, ಚಂದ್ರಶೇಖರ ಗಾಣಿಗೇರ, ಸಂತೋಷ ಕಟ್ಟಿ, ಸರಸ್ವತಿ ಮೆಹರವಾಡೆ, ಗಾಯತ್ರಿ ನೆಲ್ಲಿಕೊಪ್ಪ, ಸವಿತಾ ಚಂದನಮಟ್ಟಿ, ಸಂತೋಷ ಶೆಟ್ಟಿ, ಹರೀಶ ಬಾರಾಡೆ, ರೋಹನ್ ಗೋಂದಕರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net