ಲಯನ್ಸ್ ಸಂಸ್ಥೆ ಕಾರ್ಯ ಶ್ಲಾಘನೀಯ

4.npk-1
Published on

ಮಡಿಕೇರಿ : ನಾಪೋಕ್ಲು ಲಯನ್ಸ್ ಸಂಸ್ಥೆಯ ಸೇವಾ ಕಾರ್ಯ ಶ್ಲಾಘನೀಯ ಎಂದು ಲಯನ್ಸ್ ಸಂಸ್ಥೆಯ ರಾಜ್ಯಪಾಲ ಡಾ. ಮೆಲ್ವಾನ್ ಡಿಸೋಜ ಹೇಳಿದರು.
ನಾಪೋಕ್ಲುವಿನ ಕೊಡವ ಸಮಾಜದ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಲಿಯೋ ಸಂಸ್ಥೆಯ ಸದಸ್ಯರು ಹಿರಿಯರ ಆದರ್ಶವನ್ನು ಮೈಗೂಡಿಸಿಕೊಂಡು ಗುರಿಯತ್ತ ಮುನ್ನಡೆಯಬೇಕು. ಅಲ್ಲದೇ, ಕ್ಲಬ್‌ನ ಉದ್ದೇಶಗಳ ಬಗ್ಗೆ ಬೆಳಕು ಚೆಲ್ಲಿದರು.

  • ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಕನ್ನಂಬೀರ ಸುದೀ ತಿಮ್ಮಯ್ಯ, ಜಿಲ್ಲಾ ಕ್ಯಾಬಿನೆಟ್ ಕಾರ್ಯದರ್ಶಿ ಓಸ್ವಾಲ್ ಡಿಸೋಜಾ, ಕೋಶಾಧಿಕಾರಿ ಸುಧಾಕರ್ ಶೆಟ್ಟಿ, ಪ್ರಾಂತಿಯ ಅಧ್ಯಕ್ಷ ನವೀನ್ ಅಂಬೆಕಲ್ಲು, ವಲಯ ಅಧ್ಯಕ್ಷ ಬಾಲಕೃಷ್ಣ, ರೋಹಿತ್ ಸಿ .ಕೆ, ನಾಪೋಕ್ಲು ಲಯನ್ಸ್ ಕಾರ್ಯದರ್ಶಿ ಎಮ್.ಬಿ. ಕುಟ್ಟಪ್ಪ, ಖಜಾಂಚಿ ಬನ್ಸಿ ಬೀಮಯ್ಯ, ಲಿಯೋ ಸಂಸ್ಥೆಯ ಅಧ್ಯಕ್ಷ ಕೆ.ಸಿ. ಗೌರಮ್ಮ , ಕಾರ್ಯದರ್ಶಿ ಮಹಮ್ಮದ್ ರಜಿನ್, ಖಜಾಂಚಿ ಕಾವೇರಮ್ಮ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net