ಶೈಕ್ಷಣಿಕ ಜಾಗೃತಿ ಮೂಡಿಸಿದ ಕಲಾಜಾಥಾ ಕಾರ್ಯ ಸ್ಮರಣೀಯ

The work of Kalajatha, which created the educational world, is memorable
ಸಿದ್ದಾಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಲಾಜಾಥಾ ತಂಡದ ಸದಸ್ಯ, ನಿವತ್ತ ಶಿಕ್ಷಕ ಎಸ್. ಎಲ್. ರಾಯಣ್ಣವರ ಅವರನ್ನು ಸನ್ಮಾನಿಸಲಾಯಿತು. ಎಸ್‌ಡಿಎಂಸಿ ಅಧ್ಯಕ್ಷ ವಿಠ್ಠಲ ಶಿಕರೆಪ್ಪಗೋಳ, ಮುಖ್ಯಗುರು ಎ. ಎಂ. ಕುಣಬಿ ಇದ್ದರು.
Published on

ಜಮಖಂಡಿ : ಶಿಕ್ಷಕರು ಪಾಠಬೋಧನೆ ಮಾಡುವ ಜೊತೆಗೆ ಕಲೆ, ಸಾಹಿತ್ಯ, ಸಂಗೀತ ಹೀಗೆ ವಿಶಿಷ್ಟ ಹವ್ಯಾಸಗಳನ್ನು ಬೆಳೆಸಿಕೊಂಡು ಕಲಾಜಾಥಾ ಮೂಲಕ ಶೈಕ್ಷಣಿಕ ಜಾಗೃತಿ ಮೂಡಿಸಿದ್ದು ಸ್ಮರಣೀಯ ಕ್ಷಣಗಳೆಂದು ಹುಲ್ಯಾಳದ ಹಿರಿಯ ಸಾಹಿತಿ ಗುರುನಾಥ ಸುತಾರ ಹೇಳಿದರು.

ತಾಲೂಕಿನ ಸಿದ್ದಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ವಿಠ್ಠರಾಯ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ಎಸ್. ಎಲ್. ರಾಯಣ್ಣವರ ಶಿಕ್ಷಕರು ಅಭಿನಯದ ಮೂಲಕ ಕಲಾಜಾಥಾ ತಂಡದಲ್ಲಿ ಗಮನಸೆಳೆದಿದ್ದಾರೆ. ಅವರ ನಿವತ್ತಿ ಜೀವನ ಸುಖಮಯವಾಗಿರಲಿ ಎಂದರು.

ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸಿ. ಜಿ. ಕಡಕೋಳ ಮಾತನಾಡಿ, ಶಿಕ್ಷಕರ ಸಂಘಟನೆಯಲ್ಲಿ, ಕಲಾಜಾಥಾದಲ್ಲಿ, ಪಾಠ ಬೋಧನೆಯಲ್ಲಿ ರಾಯಣ್ಣವರ ಎಲ್ಲರ ಮೆಚ್ಚುಗೆ ಗಳಿಸಿದವರು ಎಂದರು.

ಕಲಾಜಾಥಾ ತಂಡದ ಸದಸ್ಯ, ನಿವತ್ತ ಶಿಕ್ಷಕ ಎಸ್. ಎಲ್. ರಾಯಣ್ಣವರ, ಜಿಲ್ಲಾ ಮಟ್ಟದ ಶಿಕ್ಷಕರ ಪ್ರಶಸ್ತಿ ಪಡೆದ ಭಾರತಿ ಮದಿನವರ ಅವರನ್ನು ತಾಲೂಕು ಕಲಾಜಾಥಾ ತಂಡದ ವತಿಯಿಂದ ಸನ್ಮಾನಿಸಲಾಯಿತು.

ರಬಕವಿ-ಬನಹಟ್ಟಿ ತಾಲೂಕು ಕಸಾಪ ಅಧ್ಯಕ್ಷ ಮ. ಕ. ಮೇಗಾಡಿ, ಕಲಾಜಾಥಾ ತಂಡದ ಸದಸ್ಯರಾದ ಮಲ್ಲಿಕಾರ್ಜುನ ಗಡೆಣ್ಣವರ, ಪಿ. ಎಂ. ಭಜಂತ್ರಿ, ಶಾಂತಪ್ಪ ಕೆ. ಅವರು ನಾಡು ನುಡಿ ಗೀತೆಗಳು, ವಚನಗಳು, ಜಾನಪದ ಗೀತೆಗಳನ್ನು ಹಾಡಿದರು. ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಪಿ. ಎಸ್. ಕಟ್ಟಿಮನಿ ಹಾರ್ಮೋನಿಯಂ ಸಾಥ್, ಕಲಾವಿದ ಮಲ್ಲಿಕಾರ್ಜುನ ನಾವಿ ತಬಲಾ ಸಾಥ್ ನೀಡಿದರು.

ಗ್ರಾಮದ ಮುಖಂಡರಾದ ಈರಯ್ಯ ಹಿರೇಮಠ ಸಾನ್ನಿಧ್ಯ ವಹಿಸಿ ಕಲಾಜಾಥಾ ತಂಡ ಹಾಡಿದ ಹಾಡುಗಳು, ಪ್ರಹಸನಗಳು, ಕಿರುನಾಟಕಗಳು ಗ್ರಾಮಸ್ಥರ ಗಮನ ಸೆಳೆದಿವೆ ಎಂದರು.

ಎಸ್‌ಡಿಎಂಸಿ ಅಧ್ಯಕ್ಷ ವಿಠ್ಠಲ ಶಿಕರೆಪ್ಪಗೋಳ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಮುಖ್ಯಗುರು, ಕಲಾತಂಡದ ನಾಯಕ ಎ. ಎಂ. ಕುಣಬಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ಶಿಕ್ಷಕ ಎಸ್. ಎನ್. ಮಣ್ಣೂರ ನಿರೂಪಿಸಿದರು. ಐ. ಎಂ. ದೊಡ್ಡವಾಡ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net