ಸಾಮಾಜಿಕ ನ್ಯಾಯಕ್ಕೆ ದೈವಗಳ ಕಾರ್ಯ ಮುಖ್ಯ

rbk 9-1
ಬನಹಟ್ಟಿಯಲ್ಲಿ ಸದ್ಗುರು ರೇವಣಸಿದ್ಧ ಶಿವಶರಣರ ಜಯಂತಿ ನಡೆಯಿತು.
Published on

ರಬಕವಿ/ಬನಹಟ್ಟಿ: ಆಧುನಿಕತೆಯ ಭರಾಟೆಯಲ್ಲಿ ಸಂಪ್ರದಾಯ ಮರೆಯುತ್ತಿರುವುದು ಆಘಾತಕಾರಿ ಬೆಳವಣಿಗೆಗೆ ಕಾರಣ ಎಂದು ಅಕ್ಕಲಕೋಟದ ಅಭಿನವ ಶ್ರೀ ರೇವಣಸಿದ್ಧ ಪಟ್ಟದೇವರು ಕಳವಳ ವ್ಯಕ್ತಪಡಿಸಿದರು.

ಬನಹಟ್ಟಿಯಲ್ಲಿ ಸದ್ಗುರು ರೇವಣಸಿದ್ಧ ಶಿವಶರಣರ ಜಯಂತಿ ಹಾಗೂ ಶ್ರೀ ಮದ್ವೀರಶೈವ ದೇವರದಾಸಿಮಯ್ಯ ಸಾಂಪ್ರದಾಯಕ ಹಟಗಾರ ದೈವ ಮಂಡಳಿಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಬದುಕಿನಲ್ಲಿ ಯಾವುದಕ್ಕೆ ಮಹತ್ವ ನೀಡಬೇಕೆಂದು ಶರಣರು ಹೇಳಿ ಕೊಟ್ಟಿದ್ದಾರೆ. ಮನಸ್ಸು ತಂಪುಗೊಳಿಸಲು ಶರಣರ ಸಂಘ ಅಗತ್ಯ ಎಂದರು.

ಶಿಕ್ಷಕ ಅಗ್ರಾಣೆಪ್ಪ ಬುದ್ನಿ ಮಾತನಾಡಿ, ನಾವು ಬಂಗಾರ ಬೆಳ್ಳಿಯಿಂದ ಶೃಂಗಾರಗೊಂಡರೆ ಸಾಲದು, ನಮ್ಮ ಆಚರಣೆ ಬಂಗಾರವಾಗಬೇಕು. ಚೆನ್ನಾಗಿ ಕೆಲಸ ಮಾಡುವುದೇ ಆಚಾರ, ಕೈ ಇರುವತನಕ ಚಂದದ ಕೆಲಸ ಮಾಡಬೇಕು. ಮಾತು ಬಲ್ಲವರು ಎಲ್ಲರ ಮನಸ್ಸು ಗೆಲ್ಲುವಂತಾಗಬೇಕು. ಒಳ್ಳೆಯ ವಿಚಾರ ಆಲಿಸಿ, ನಮ್ಮಲ್ಲಿರುವ ಒಳ್ಳೆಯ ವಿಚಾರ ವ್ಯಕ್ತವಾದಾಗ ಮಾತ್ರ ಹೆಚ್ಚಿನ ಜ್ಞಾನ ಬರಲು ಸಾಧ್ಯ ಎಂದರು.

ಇದಕ್ಕೂ ಮುನ್ನ ನಗರಾದ್ಯಂತ ಶರಣರ ಭಾವಚಿತ್ರ ಮೆರವಣಿಗೆ ನಡೆಯಿತು.

ಸುರೇಶ ಅಬಕಾರ, ಶಂಕರ ಸೊರಗಾಂವಿ, ರವಿ ಬಾಡಗಿ, ಶೇಖರ ಹಕ್ಕಲದಡ್ಡಿ, ಸುರೇಶ ಬೀಳಗಿ, ದೇವೇಂದ್ರ ಶೀಲವಂತ, ರಮೇಶ ಕೊಣ್ಣೂರ, ರಾಜು ಬೀಳಗಿ, ಮಹಾನಿಂಗ ಶೀಲವಂತ, ಶಂಕರ ಅಥಣಿ, ಶಿವು ಉಳೋಲಗಿಡದ, ವಿರುಪಾಕ್ಷಪ್ಪ ಕೊಕಟನೂರ, ದಾನಪ್ಪ ಕೊಣ್ಣೂರ, ಕಲ್ಲಪ್ಪ ಪತ್ತಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net