ಕಲೆ, ಕಲಾವಿದರ ಪ್ರೋತ್ಸಾಹಿಸುವ ಕೆಲಸ ನಿರಂತರ

SWAMIJI KLG
Published on

ಕಲಘಟಗಿ: ಗದುಗಿನ ಡಾ. ಪುಟರಾಜ ಗವಾಯಿಗಳ ಸಂಘಟನೆ ಸರ್ವ ಕಲೆ ಪ್ರೋತ್ಸಾಹಿಸುವ ಹಾಗೂ ಕಲಾವಿದರ ರಕ್ಷಣೆಗೆ ಮುಂದಾಗುವ ಉದ್ದೇಶ ಹೊಂದಿದೆ ಎಂದು ಪುಟ್ಟರಾಜ ಸೇವಾ ಸಮಿತಿ ಅಧ್ಯಕ್ಷ ಚನ್ನವೀರಸ್ವಾಮಿ ಹಿರೇಮಠ ಹೇಳಿದರು.

ಪಟ್ಟಣದ ಹನ್ನೆರಡುಮಠದ ಸಭಾಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಡಾ.ಪಂ. ಪುಟ್ಟರಾಜ ಸೇವಾ ಸಮಿತಿ ತಾಲೂಕು ಘಟಕ ಉದ್ಘಾಟನೆ, ಗುರು ವಚನ ಪ್ರಭ, ಪ್ರಚಾರ ಅಭಿಮಾನ, ಗುರು ಸೇವಾ ದೀಕ್ಷಾ ಸಮಾರಂಭ ಹಾಗೂ ಅಂಗವಿಕಲರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗವಾಯಿಗಳ ಸ್ಮರಣೆ ಮಾಡಿದರೆ ಬಸವಾದಿ ಶರಣರ, ಹಾನಗಲ್ಲ ಕುಮಾರೇಶ್ವರ, ಪಂಚಾಕ್ಷರಿ ಗವಾಯಿ ಹಾಗೂ ಎಲ್ಲ ಶಿವಶರಣರ ಸ್ಮರಣೆ ಮಾಡಿದಂತಾಗುತ್ತದೆ ಎಂದರು.

ಮನಸೂರ ರೇವಣಸಿದ್ಧೇಶ್ವರ ಮಹಾಮಠದ ಬಸವರಾಜ ದೇವರು ಮಾತನಾಡಿ, ಮಹಾತ್ಮರ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಜೀವನ ಪಾವನವಾಗುತ್ತದೆ ಎಂದರು.

ಜಾನಪದ ಕಲಾವಿದ ಮಲ್ಲಯ್ಯ ಸ್ವಾಮಿ ತೋಟಗಂಟಿ ಮಾತನಾಡಿ, ಇವತ್ತು ಏನಾದರೂ ಕಲೆ, ಸಾಹಿತ್ಯ, ಸಂಗೀತ ಕಲಾವಿದರು ಉಳಿಯಬೇಕಾದರೆ ಪುಟ್ಟರಾಜ ಗವಾಯಿಗಳ ಶ್ರಮ ಬಹಳಷ್ಟಿದೆ. ಅಂಧರ ಬಾಳಿಗೆ ಬೆಳಕಾಗಿ ಕಲೆ, ಸಾಹಿತ್ಯ, ಸಂಗೀತ ಅಳವಡಿಸಿಕೊಂಡು ಬದುಕುವಂತೆ ಕಲಿಸಿದ ಒಬ್ಬ ಮಹಾನ್ ಸಂತರು ಪುಟ್ಟರಾಜ ಶ್ರೀಗಳು ಎಂದರು.

ಡಾ. ಪಂ ಪುಟ್ಟರಾಜ ಸೇವಾ ಸಮಿತಿಯ ನೂತನ ತಾಲೂಕಾಧ್ಯಕ್ಷ ಸುರೇಶ ಕಳಸಣ್ಣವರ ಮಾತನಾಡಿದರು. ಹನ್ನೆರಡು ಮಠದ ಶ್ರೀ ರೇವಣಸಿದ್ಧೇಶ್ವರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ವಕೀಲರ ಸಂಘದ ತಾಲೂಕಾಧ್ಯಕ್ಷ ಮಂಜುನಾಥ ಧನಿಗೊಂಡ, ಪರಮಾನಂದ ಒಡೆಯರ, ಎಚ್. ಎನ್. ಸುಣಗದ, ಶಿವಪ್ಪ ಅದರಗುಂಚಿ, ಗಂಗಾಧರ ಘಾಳಿ, ಮಕ್ಕಳ ಸಾಹಿತಿ ವೈ.ಜಿ. ಭಗವತಿ, ಮಂಜುಳಾ ನಾಯ್ಕ, ವಿ.ಎಸ್. ನಾಗಲೋತಿಮಠ, ರವೀಂದ್ರ ತೋಟಗಂಟಿ, ಶಿವಪ್ಪ ಧನಿಗೊಂಡ, ಶಿವಪುತ್ರಯ್ಯ ತೇಗೂರಮಠ, ಗಿರೀಶ ಬಂಡಿ, ಶಂಕರಗೌಡ ಭಾವಿಕಟ್ಟಿ, ಶಿವು ಪುಂಡಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net