ಧರ್ಮಸ್ಥಳ ಯೋಜನೆಯ ಕಾರ್ಯ ಶ್ಲಾಘನೀಯ

12kdr4
Published on

ಕಡೂರು: ವ್ಯಕ್ತಿಯ ಬದಲಾವಣೆಗೆ, ಸಾಮಾಜಿಕ ಕಳಕಳಿಗೆ ಒತ್ತು ನೀಡುತ್ತಿರುವ ಜನಜಾಗೃತಿಯ ವೇದಿಕೆ ಕಾರ್ಯಚಟುವಟಿಕೆಗಳು ಶ್ಲಾಘನೀಯ ಎಂದು ಪಿಎಸ್‌ಐ ಲೀಲಾವತಿ ತಿಳಿಸಿದರು.

ತಾಲೂಕಿನ ಮಲ್ಲೇಶ್ವರ ಗ್ರಾಮದ ಶ್ರೀ ಸ್ವರ್ಣಾಂಬ ಸಮುದಾಯ ಭವನದಲ್ಲಿ ಮಂಗಳವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಜಾಗೃತಿ ವೇದಿಕೆ ಸಹಯೋಗದೊಂದಿಗೆ ನಡೆದ ತಾಲೂಕು ಮಟ್ಟದ ನವಜೀವನ ಸದಸ್ಯರ ನವಜೀವನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹಲವು ದುಶ್ಚಟಗಳಿಗೆ ಮಾರುಹೋಗಿರುವ ವ್ಯಕ್ತಿಯನ್ನು ಮತ್ತೆ ನವಜೀವನದ ಕಡೆಗೆ ಪ್ರೋತ್ಸಾಹಿಸುವ ಕಾರ್ಯಗಳು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ವೇದಿಕೆಯಿಂದ ನಡೆಯುತ್ತಿರುವುದು ಹಲವು ಕುಟುಂಬಗಳ ರಕ್ಷಣೆ ಮಾಡಿದಂತಾಗಿದೆ. ಕುಡಿತದ ದಾಸ್ಯದಿಂದ ಮುಕ್ತಿಗೊಳಿಸಿಕೊಂಡ ವ್ಯಕ್ತಿಯಲ್ಲಿ ಸಾಕಷ್ಟು ಬದಲಾವಣೆಗೆ ಪ್ರೇರೆಪಿಸಿದಂತಾಗಿದೆ. ತಮ್ಮ ಮನೆ ಕುಟುಂಬವು ಸಮಾಜದ ಮುಖ್ಯವಾಹಿನಿಗೆ ಕರೆತರುವಲ್ಲಿ ಶ್ರಮಿಸುತ್ತಿರುವುದು ಹೆಮ್ಮೆಯ ಸಂಗತಿ. ಇಂತಹ ವೇದಿಕೆ ಕಾರ್ಯಗಳು ಹೆಚ್ಚು ನಡೆದಾಗ ಜನಜಾಗೃತಿಯೊಂದಿಗೆ ಸಮಾಜಮುಖಿಯಾಗಿ ಬದಲಾವಣೆಗೊಳ್ಳಲು ಸಾಧ್ಯ ಎಂದರು.

ತಾಲೂಕು ಯೋಜನಾಧಿಕಾರಿ ಪ್ರಸಾದ್, ಭಾಗ್ಯ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಆಶಾ ತಮ್ಮಯ್ಯ, ರಾಜು ಮಹೇಶ್ವರ್, ಸೋಮಶೇಖರ್, ಜ್ಞಾನವಿಕಾಸ ಕೇಂದ್ರದ ತಾಲೂಕು ಯೋಜನಾಧಿಕಾರಿ ಭಾಗ್ಯಾ, ಮೇಲ್ವಿಚಾರಕಿ ಸುಮಾ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net