ಡೇಟಾ ಎಂಟ್ರಿ ಆಪರೇಟರ್‌ಗಳ ಕಾರ್ಯ ಶ್ಲಾಘನೀಯ

ತಿ.ನರಸೀಪುರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕಂಪ್ಯೂಟರ್ ಆಪರೇಟರ್‌ಗಳ ದಿನ ಆಯೋಜಿಸಲಾಗಿತ್ತು. ಪಿ.ಎಸ್. ಅನಂತರಾಜು, ಶಶಿಕುಮಾರ್, ಎಂ.ಮಹೇಶ್, ಸಿದ್ದರಾಜು, ಬಿ.ಎಸ್.ಪ್ರಕಾಶ್ ಇತರರು ಇದ್ದರು.
ತಿ.ನರಸೀಪುರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕಂಪ್ಯೂಟರ್ ಆಪರೇಟರ್‌ಗಳ ದಿನ ಆಯೋಜಿಸಲಾಗಿತ್ತು. ಪಿ.ಎಸ್. ಅನಂತರಾಜು, ಶಶಿಕುಮಾರ್, ಎಂ.ಮಹೇಶ್, ಸಿದ್ದರಾಜು, ಬಿ.ಎಸ್.ಪ್ರಕಾಶ್ ಇತರರು ಇದ್ದರು.
Published on

ತಿ.ನರಸೀಪುರ: ತಾಂತ್ರಿಕ ಸಮಸ್ಯೆ ಹಾಗೂ ಕೆಲಸದ ಒತ್ತಡದ ನಡುವೆಯೂ ಕಂಪ್ಯೂಟರ್ ಡೇಟಾ ಎಂಟ್ರಿ ಆಪರೇಟರ್‌ಗಳು ಗ್ರಾಮ ಪಂಚಾಯಿತಿಗಳಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕಾಧಿಕಾರಿ ಪಿ.ಎಸ್.ಅನಂತರಾಜು ಮೆಚ್ಚುಗೆ ವ್ಯಕ್ತಪಡಿಸಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಇತ್ತೀಚೆಗೆ ಕ್ಲಾರ್ಕ್ ಕಂ ಡೇಟಾ ಎಂಟ್ರಿ ಆಪರೇಟರ್ ಸಂಘದಿಂದ ಆಯೋಜಿಸಿದ್ದ ಕಂಪ್ಯೂಟರ್ ಆಪರೇಟರ್‌ಗಳ ದಿನಾಚರಣೆಯಲ್ಲಿ ಚಾಲ್ಸ್ ಬ್ಯಾಬೆಜು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.

ಗ್ರಾಮ ಪಂಚಾಯಿತಿಗಳಲ್ಲಿ ದಾಖಲೆಗಳ ನೋಂದಣಿ, ಆಡಳಿತ ಎಲ್ಲವೂ ಈಗ ಯಾಂತ್ರಿಕೃತ ಗೊಂಡು, ಕಂಪ್ಯೂಟರಿಕರಣವಾಗುತ್ತಿದೆ. ಈ ಹಿನ್ನಲೆಯಲ್ಲಿ ಡೇಟಾ ಎಂಟ್ರಿ ಆಪರೇಟರ್‌ಗಳ ಕಾರ್ಯನಿರ್ವಹಣೆ ನಿತ್ಯವೂ ನಡೆಯಬೇಕು ಎಂದರು.

ಸಂಘದ ತಾಲೂಕು ಅಧ್ಯಕ್ಷ ಎಂ.ಮಹೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕ ಶಶಿಕುಮಾರ್, ತಾಲೂಕು ಯೋಜನಾಧಿಕಾರಿ ರಂಗಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net