

ವಿಜಯವಾಣಿ ಸುದ್ದಿಜಾಲ ಹೆಬ್ರಿ
ಶಾರೀರಿಕ, ಮಾನಸಿಕ ಸಧೃಢತೆಗೆ ಕ್ರೀಡೆ ಅವಶ್ಯಕ. ಒತ್ತಡದ ಜೀವನ ನಿಯಂತ್ರಣಕ್ಕೆ ಆಟೋಟಗಳಲ್ಲಿ ತೊಡಗಿಸಿಕೊಳ್ಳಬೇಕು. ಬಲ್ಲಾಡಿಯ ಯುವಕರು ಕ್ರಿಕೆಟ್ ಪಂದ್ಯಾಟ ಆಯೋಜಿಸಿ ಕ್ರೀಡಾಪಟು ಸುಶಾಂತ್‌ಗೆ ಗೌರವ ಸಲ್ಲಿಸಿದ್ದಾರೆ ಎಂದು ಶಾಸಕ ವಿ.ಸುನೀಲ್ ಕುಮಾರ್ ಹೇಳಿದರು.
ಮುದ್ರಾಡಿ ಗ್ರಾಮದ ವಿದ್ಯಾನಗರ ಫ್ರೆಂಡ್ಸ್ ಬಲ್ಲಾಡಿ ಆಶ್ರಯದಲ್ಲಿ ತುಂಡುಗುಡ್ಡೆ ಶಾಲಾ ಮೈದಾನದಲ್ಲಿ 40 ಗಜಗಳ ಅಂಡರ್‌ಆರ್ಮ್ ಕ್ರಿಕೆಟ್ ಟೂರ್ನಿ ಉದ್ಘಾಟಿಸಿ ಮಾತನಾಡಿದರು.
ಮುದ್ರಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಸಂತಿ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಮುನಿಯಾಲು ಉದಯಕುಮಾರ್ ಶೆಟ್ಟಿ, ಮಂಜುನಾಥ್ ಪೂಜಾರಿ, ಸದಸ್ಯ ಗಣಪತಿ ಎಂಸ, ಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್, ಸಂತೋಷ್ ಶೆಟ್ಟಿ, ಶ್ಯಾಮ ಶೆಟ್ಟಿ, ಪ್ರಕಾಶ್ ರಾವ್, ಸರೋಜಿನಿ ಶೆಟ್ಟಿ, ಕ್ರೀಡಾಪಟು ರಾಜೇಶ್ ಉಪಸ್ಥಿತರಿದ್ದರು. ಸೂರಜ್ ಶೆಟ್ಟಿ ಸ್ವಾಗತಿಸಿದರು. ಸುದೀಪ್ ಶೆಟ್ಟಿ ವಂದಿಸಿದರು. ಗಗನ್ ಸೂರಿಮಣ್ಣು ಕಾರ್ಯಕ್ರಮ ನಿರೂಪಿಸಿದರು.
ಸಮಾರೋಪ ಸಮಾರಂಭದಲ್ಲಿ ಮುದ್ರಾಡಿ ಗ್ರಾಪಂ ಮಾಜಿ ಅಧ್ಯಕ್ಷ ಮಂಜುನಾಥ್ ಹೆಗ್ಡೆ, ಉದ್ಯಮಿ ಹರೀಶ್ ಶೆಟ್ಟಿ ಪಡುಕುಡೂರು, ಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್, ಉದ್ಯಮಿಗಳಾದ ಶರತ್ ಶೆಟ್ಟಿ, ಸನ್ಮಿತ್ ಶೆಟ್ಟಿ, ಶರಣ್ಯಾ ಶೆಟ್ಟಿ, ಸುರೇಶ್, ಕ್ರೀಡಾಪಟು ಪ್ರವೀಣ್ ಶೆಟ್ಟಿ, ಸೂರಜ್ ಶೆಟ್ಟಿ, ಸಂದೀಪ್ ಶೆಟ್ಟಿ ಪಾಲ್ಗೊಂಡು ವಿಜೇತರಿಗೆ ಬಹುಮಾನ ವಿತರಿಸಿದರು. ಬಳಿಕ ಸನ್ಮಿತ್ ಶೆಟ್ಟಿ ದಂಪತಿಯನ್ನು ಸನ್ಮಾನಿಸಲಾಯಿತು. ಹೆಬ್ರಿ ಬೀಡು ಫ್ರೆಂಡ್ಸ್ ತಂಡ ಸುಶಾಂತ್ ಟ್ರೋಫಿ 2025 ವಿಜೇತರಾಗಿದ್ದು, ಅಂಡಾರು ಫ್ರೆಂಡ್ಸ್ ರನ್ನರ್‌ಅಪ್‌ಗೆ ತೃಪ್ತರಾದರು.