ಅರೇಹಳ್ಳಿ ಲಯನ್ಸ್ ಸಂಸ್ಥೆಯ ಕಾರ್ಯ ಶ್ಲಾಘನೀಯ

13blrp3
ಅರೇಹಳ್ಳಿ ರೋಟರಿ ಭವನದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ 2025-26ನೇ ಸಾಲಿನ ಲಯನ್ಸ್ ಸಂಸ್ಥೆ ನೂತನ ಪದಾಧಿಕಾರಿಗಳ ಪದಗ್ರಹಣದಲ್ಲಿ ಗಣ್ಯರು ಪಾಲ್ಗೊಂಡಿದ್ದರು.
Published on

ಬೇಲೂರು: ಗ್ರಾಮೀಣ ಭಾಗದಲ್ಲಿ ಸೇವಾ ಸಂಸ್ಥೆ ಹುಟ್ಟು ಹಾಕಿ 13 ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಲೇ ಸ್ವಂತ ಕಟ್ಟಡ ಹೊಂದಿದ ಅರೇಹಳ್ಳಿ ಲಯನ್ಸ್ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಪೂರ್ವ ವಿಭಾಗದ ಪ್ರಾಂತಪಾಲ ಹಾಗೂ ಬಹು ಪರಿಷತ್ ಅಧ್ಯಕ್ಷ ಪಿಎಂಜೆಎಫ್ ವಸಂತ್ ಕುಮಾರ್‌ಶೆಟ್ಟಿ ಹೇಳಿದರು.

ತಾಲೂಕಿನ ಅರೇಹಳ್ಳಿ ರೋಟರಿ ಭವನದಲ್ಲಿ ಶನಿವಾರ ಆಯೋಜಿಸಿದ್ದ 2025-26ನೇ ಸಾಲಿನ ಲಯನ್ಸ್ ಸಂಸ್ಥೆ ನೂತನ ಪದಾಧಿಕಾರಿಗಳ ಪದಗ್ರಹಣದಲ್ಲಿ ಮಾತನಾಡಿದ ಅವರು, ಜನರನ್ನು ದೇವರೆಂದು ಭಾವಿಸಿ ನಮ್ಮ ಸಂಸ್ಥೆಯ ಪ್ರತಿ ಸದಸ್ಯ ಸೇವೆಗೆ ಮುಂದಾಗಬೇಕು. ಅಲ್ಲದೆ ಸಂಸ್ಥೆ ಮುನ್ನಡೆಸುವವನು ಸೇವೆ ಮಾಡುತ್ತಾನೆ ಎಂಬ ಧ್ಯೇಯ ವಾಕ್ಯವನ್ನು ಹೊಂದಿದ್ದು, ನಾವೆಲ್ಲರೂ ಸೇವೆಯೇ ಪರಮೋಚ್ಛ ಕೆಲಸವೆಂದು ಭಾವಿಸಬೇಕು ಎಂದರು.

ನೂತನ ಲಯನ್ಸ್ ಅಧ್ಯಕ್ಷೆ ರಶ್ಮಿ ಸೋಮಯ್ಯ ಮಾತನಾಡಿ, ಸಕಲೇಶಪುರ ಲಯನ್ಸ್ ಸಂಸ್ಥೆ ಪದಾಧಿಕಾರಿಗಳು ಅರೇಹಳ್ಳಿಯಲ್ಲಿ ಲಯನ್ಸ್ ಸಂಸ್ಥೆಯನ್ನು ಹುಟ್ಟು ಹಾಕಲು ಕಾರಣಕರ್ತರಾಗಿದ್ದಾರೆ. 2013 ರಿಂದ ಲಯನ್ಸ್ ಸಂಸ್ಥೆಯಲ್ಲಿ ಸಕ್ರಿಯವಾಗಿ 2022ರಲ್ಲಿ ಸದಸ್ಯೆಯಾಗಿ ಸೇರ್ಪಡೆಯಾಗಲು ಅವಕಾಶ ದೊರಕಿತು. 2025-26 ನೇ ಸಾಲಿಗೆ ಪ್ರಥಮ ಮಹಿಳಾ ಅಧ್ಯಕ್ಷೆಯಾಗಿದ್ದು ಸಹಕರಿಸಿದ ಎಲ್ಲರಿಗೂ ಧನ್ಯವಾದ. ನಾನಾ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡಿರುವ ನಮ್ಮ ಸಂಸ್ಥೆ ಮುಂದಿನ ದಿನಗಳಲ್ಲಿ ಹಲವಾರು ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಯಾಗಲಿ ಎಂದು ಹಾರೈಸಿದರು.

2025-26 ನೇ ಸಾಲಿಗೆ ಕಾರ್ಯದರ್ಶಿಯಾಗಿ ಎಚ್.ಎಸ್.ಬೃಂದನ್, ಖಜಾಂಚಿಯಾಗಿ ಸೌಜನ್ಯ ಪೃಥ್ವಿರಾಜ್ ಅಧಿಕಾರ ಸ್ವೀಕರಿಸಿದರು. ಸಕಲೇಶಪುರ ಶಾಸಕ ಸಿಮೆಂಟ್ ಮಂಜು, ಕ್ಯಾಬಿನೇಟ್ ಸೆಕ್ರೆಟರಿ ಚಂದ್ರೇಗೌಡ, ಸಂಜೀತ್ ಶೆಟ್ಟಿ, ಪ್ರಾಂತೀಯ ಅಧ್ಯಕ್ಷ ಅಬ್ದುಲ್ ಲತೀಫ್, ವಲಯಾಧ್ಯಕ್ಷ ಚಾಮರಾಜ್, ನಿಕಟ ಪೂರ್ವ ಅಧ್ಯಕ್ಷ ಸಂತೋಷ್ ಕುಮಾರ್ ಸೇರಿದಂತೆ ಲಯನ್ಸ್ ಪದಾಧಿಕಾರಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net