ಕ್ಷೌರಿಕರ ಕಾರ್ಯ ಪವಿತ್ರವಾದದು

17MNL1
Published on

ಮುನವಳ್ಳಿ: ಧರ್ಮ, ಜಾತಿ, ಲಿಂಗ, ರೂಪ ಭೇದವಿಲ್ಲದೆ ಸೇವೆ ಒದಗಿಸುತ್ತಿರುವ ಕ್ಷೌರಿಕರ ಕಾರ್ಯ ಶ್ಲಾಘನೀಯ ಎಂದು ಮುನವಳ್ಳಿ ಪಿಕೆಪಿಎಸ್ ಅಧ್ಯಕ್ಷ ಅಂಬರೀಷ ಯಲಿಗಾರ ಹೇಳಿದರು.

ಪಟ್ಟಣದ ವಿ.ಪಿ.ಜೇವೂರ ಸ್ಮಾರಕ ಕಿವುಡ ಮತ್ತು ಮೂಗ ಮಕ್ಕಳ ವಸತಿ ಶಾಲೆಯಲ್ಲಿ ಮಂಗಳವಾರ ಬಸವಪ್ರಿಯ ಹಡಪದ ಅಪ್ಪಣ್ಣ ಸಮಾಜ ಸಂಘದಿಂದ ಹಮ್ಮಿಕೊಂಡಿದ್ದ ವಿಶ್ವ ಕ್ಷೌರಿಕರ ದಿನಾಚರಣೆಯಲ್ಲಿ  ಮಾತನಾಡಿದರು.

ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಪಂಚನಗೌಡ ದ್ಯಾಮನಗೌಡರ ಮಾತನಾಡಿ, ಹಡಪದ ಸಮಾಜದವರು ತಮ್ಮ ಕಾಯಕ ವೃತ್ತಿಯನ್ನು ಅತ್ಯಂತ ಪ್ರಾಮಾಣಿಕವಾಗಿ ಮಾಡುತ್ತಾ ಬರುತ್ತಿದ್ದಾರೆ. ಸರ್ಕಾರ ಅವರನ್ನು ಪ್ರೋತ್ಸಾಹಿಸಲು ವಿಶೇಷ ಯೋಜನೆ ಹಮ್ಮಿಕೊಳ್ಳಬೇಕು ಎಂದರು.

ಪುರಸಭೆ ಸದಸ್ಯ ಸುಭಾಸ ಗೀದಿಗೌಡ್ರ, ಸಂಘದ ಗೌರವಾಧ್ಯಕ್ಷ ಈರಣ್ಣ ಉಜ್ಜಿನಕೊಪ್ಪ, ಪಂಚಪ್ಪ ಜಂಬಗಿ, ಸಂಘದ ಅಧ್ಯಕ್ಷ ಅಣ್ಣಪ್ಪ ಮಾಲದಿನ್ನಿ, ಉಪಾಧ್ಯಕ್ಷ ರವಿ ಹಡಪದ, ಪ್ರಧಾನ ಕಾರ್ಯದರ್ಶಿ ಸೋಮು ಉಜ್ಜಿನಕೊಪ್ಪ, ಕಾರ್ಯದರ್ಶಿ ರವಿ ಮೂಡಲಗಿ, ಖಜಾಂಚಿ ವೀರು ಮುರನಾಳ, ಸಂಘಟನಾ ಕಾರ್ಯದರ್ಶಿ ಪ್ರಶಾಂತ ಉಜ್ಜಿನಕೊಪ್ಪ, ಸೋಮು ಹಡಪದ, ಯಲ್ಲಪ್ಪ ಹಡಪದ, ಮಲ್ಲಿಕಾರ್ಜುನ ಹಡಪದ, ಶಂಕರ ಮುರನಾಳ, ಶಿವು ಕಾಟಿ, ಮಂಜುನಾಥ ಮಾವಿನಕಟ್ಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net