ಕೃತಿ ಬಿಡುಗಡೆ ಇಂದು

Vidyavardhaka-Sangha-DWD
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಕರ್ನಾಟಕ ವಿದ್ಯಾವರ್ಧಕ ಸಂಘವು, ಶತಾಯುಷಿ ದಿ. ಸಂಗಮ್ಮ ಇಮ್ರಾಪುರ ದತ್ತಿ ಸ್ಮರಣೆ ನಿಮಿತ್ತ ಮೇ ೨೦ರಂದು ಸಂಜೆ ೫.೩೦ಕ್ಕೆ ಸಂಘದ ರಾ.ಹ. ದೇಶಪಾಂಡೆ ಭವನದಲ್ಲಿ ಪ್ರೊ. ಸೋಮಶೇಖರ ಇಮ್ರಾಪುರ ಅವರ ಸಮಗ್ರ ಕಾವ್ಯ ಸಂಪುಟ ಬಿಸಿಲ ಹೂ ಕೃತಿ ಬಿಡುಗಡೆ ಸಮಾರಂಭ ಏರ್ಪಡಿಸಿದೆ.
ವಿಮರ್ಶಕ ಪ್ರೊ. ಸಿ. ಆರ್. ಯರವಿನತೆಲಿಮಠ ಗ್ರಂಥ ಬಿಡುಗಡೆ ಮಾಡುವರು. ವಿಶ್ರಾಂತ ಪ್ರಾಧ್ಯಾಪಕ ಡಾ. ಅರವಿಂದ ಮಾಲಗತ್ತಿ ಅತಿಥಿಯಾಗಿ ಆಗಮಿಸುವರು. ಪ್ರೊ. ಮಾಲತಿ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸುವರು. ಪ್ರೊ. ಸೋಮಶೇಖರ ಇಮ್ರಾಪುರ, ಪ್ರೊ. ಶಾಂತಾ ಇಮ್ರಾಪುರ ಉಪಸ್ಥಿತರಿರುವರು. ಸುಜಾತಾ ಗುರವ ಸುಗಮ ಸಂಗೀತ ಪ್ರಸ್ತುತ ಪಡಿಸುವರು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net