

ವಿಜಯಪುರ: ತಳವಾರ ಎಂಬುದು ತಲವಾರ ಎಂಬ ಪದದ ಉತ್ಪತ್ತಿ. ಹಿಂದೆ ತಲವಾರ ಹಿಡಿದು ಕೋಟೆ ಕೊತ್ತಲುಗಳನ್ನು ಕಾಯುತ್ತಿದ್ದ ನಾಯಕ ಸಮುದಾಯದ ಒಳಪಂಡಗಳಲ್ಲಿ ತಳವಾರ ಕೂಡ ಒಂದು. ಇದೀಗ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಯಾಗಿರುವ ತಳವಾರ ಸಮುದಾಯ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕ ಮತ್ತು ರಾಜಕೀಯವಾಗಿ ಏಳಿಗೆ ಸಾಧಿಸಲು ಒಗ್ಗಟ್ಟು ಪ್ರದರ್ಶಿಸಬೇಕೆಂದು ಸಮಾಜದ ಮುಖಂಡ ಸಂತೋಷ ಬಾಳಪ್ಪ ಕೋಳಿ ಹೇಳಿದರು.
ಇಂಡಿ ತಾಲೂಕಿನ ಸೊನಕನಹಳ್ಳಿ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಯ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ತಳವಾರ ಸಮುದಾಯ ಅನಾದಿ ಕಾಲದಿಂದಲೂ ಬೇಟೆಯಾಡಿಕೊಂಡು, ಕೋಟೆ-ಕೊತ್ತಲುಗಳ ಕಾವಲು ಮಾಡಿಕೊಂಡು, ಪಾಳೇಗಾರಿಕೆ ಮಾಡಿಕೊಂಡು ಬಂದಿದ್ದು, ಸ್ವಾತಂತ್ರಾೃ ನಂತರ ಮೂಲ ವೃತ್ತಿಯನ್ನು ಕಳೆದುಕೊಂಡು ಶೋಚನೀಯ ಸ್ಥಿತಿ ತಲುಪಿತು. ಈ ಹಿಂದೆ ಪರಿಶಿಷ್ಟ ಪಂಗಡದ ಪ್ರಮಾಣ ಪತ್ರ ಪಡೆಯುತ್ತಿದ್ದ ಈ ಸಮಾಜ ಕೆಲ ಕಾಲ ಗೊಂದಲದಿಂದಾಗಿ ಮೀಸಲಾತಿಯಿಂದ ವಂಚಿತಗೊಂಡಿತ್ತು. ಇದೀಗ ಕೇಂದ್ರ ಸರ್ಕಾರ ರಾಜ್ಯಪತ್ರ ಹೊರಡಿಸುವ ಮೂಲಕ ಕೈ ತಪ್ಪಿ ಹೋಗಿದ್ದ ಮೀಸಲಾತಿಯನ್ನು ಮರಳಿಸಿದೆ. ಈ ಸೌಲಭ್ಯವನ್ನು ಸರ್ವರೂ ಸದುಪಯೋಗ ಪಡೆಸಿಕೊಳ್ಳಬೇಕೆಂದರು.
ಮುಖಂಡ ಹಣಮಂತ ತಳವಾರ ಮಾತನಾಡಿ, ಮಹರ್ಷಿ ವಾಲ್ಮೀಕಿ, ಏಕಲವ್ಯ ಮುಂತಾದವರು ಬಿಲ್ವಿದ್ಯೆ ಪ್ರವೀಣರು. ನಾಯಕ, ನಾಯಕ್ಡ, ಬೇಡ, ತಳವಾರ ಮತ್ತಿತರ ಸಮುದಾಯಗಳ ಮೂಲ ಪುರುಷರು. ರಾಮಾಯಣದಂಥ ಶ್ರೇಷ್ಠ ಕಾವ್ಯ ರಚಿಸಿದ ವಾಲ್ಮೀಕಿ ಅವರ ಆದರ್ಶಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕೆಂದರು.
ಮುಖಂಡರಾದ ಸಿದರಾಯ ತಳವಾರ, ಸತ್ಯ ಜತ್ತಿ, ಸುಭಾಸ ಕೋಳಿ, ಸಿದ್ದು ಕೋಳಿ, ಯಲ್ಲಪ್ಪ ರೇ.ಕೋಳಿ, ಕಲ್ಲಪ್ಪ ಗೋಳಗಿ, ಸತ್ಯಪ್ಪ ಕೋಳಿ, ಮಲ್ಲು ತಳವಾರ, ಪರಶುರಾಮ ಕೋಳಿ, ಗಿರಮಲ ಕೋಳಿ, ಸಿದ್ದಪ್ಪ ಗೋಳಗಿ, ದಶರಥ ತಳವಾರ, ಭೀಮಷ್ಯ ತಳವಾರ, ಅಮಸಿದ್ದ ತಳವಾರ, ಕರಣ ಕೋಳಿ, ಅಭಿಶೇಕ ಕೋಳಿ, ತಮ್ಮರಾಯ ಗೋಳಗಿ, ಲಕ್ಕಪ್ಪ ಕೋಳಿ ಮತ್ತಿತರರಿದ್ದರು.