ಶರಣರ ನುಡಿ ಸನ್ಮಾರ್ಗಕ್ಕೆ ಸೋಪಾನ

12 tlk-1
ತಾಳಿಕೋಟೆಯ ಶರಣಮುತ್ಯಾ ಮಠದ ಪ್ರಾಂಗಣದಲ್ಲಿ ಹಮ್ಮಿಕೊಂಡಿರುವ ಪುರಾಣದಲ್ಲಿ ಕೆ.ವೈ. ಬಿರಾದಾರ ಮಾತನಾಡಿದರು. ಪ್ರವಚನಕಾರ ಮಹಾದೇವ ಶಾಸಿ ಇತರರಿದ್ದರು.
Published on

ತಾಳಿಕೋಟೆ: ಶರಣರ, ಮಹಾತ್ಮರ ನುಡಿಗಳು ಸನ್ಮಾರ್ಗಕ್ಕೆ ಸೋಪಾನವಾಗಿವೆ ಎಂದು ಬಸರಕೋಡ ಪವಾಡ ಬಸವೇಶ್ವರ ಸಂಸ್ಥೆ ಅಧ್ಯಕ್ಷ ಕೆ.ವೈ. ಬಿರಾದಾರ ಹೇಳಿದರು.

ಇಲ್ಲಿನ ಶರಣಮುತ್ಯಾ ದೇವಸ್ಥಾನ ಆವರಣದಲ್ಲಿ ಹಮ್ಮಿಕೊಂಡಿರುವ ಪವಾಡ ಬಸವೇಶ್ವರ ಪುರಾಣ ಕಾರ್ಯಕ್ರಮದಲ್ಲಿ ಮಂಗಳವಾರ ಪಾಲ್ಗೊಂಡು ಮಾತನಾಡಿದ ಅವರು, ಪವಾಡ ಬಸವೇಶ್ವರರು ಮಹಿಮಾ ಪುರುಷರು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲರೂ ಸಾಗೋಣ ಎಂದರು.

ಕೊಡೇಕಲ್ಲ ದುರದುಂಡೇಶ್ವರ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಹಾದೇವಯ್ಯ ಶಾಸಿ ಪವಾಡ ಬಸವೇಶ್ವರ ಪುರಾಣ ಹೇಳಿದರು. ಸುಮಂಗಲೆಯರು ಉಡಿ ತುಂಬಿದರು. ಶ್ರೀಮಂತ ಸಿಂಧು ಬಲ್ಲಾಳ ನಾಡಗೌಡ, ಸಂಗನಗೌಡ ಬಿರಾದಾರ, ವೀರಯ್ಯ ಮಂಕಣಿ ಹಾಗೂ ಉಡಿ ತುಂಬುವ ಕಾರ್ಯಕ್ರಮಕ್ಕೆ ಸಹಕರಿಸಿದವರನ್ನು ಸನ್ಮಾನಿಸಲಾಯಿತು. ವಿಶ್ವನಾಥರೆಡ್ಡಿ ನಾಡಗೌಡ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಿದ್ದರು.

ಶರಣರ ಮಠದ ಬಸಣ್ಣ ಶರಣಮುತ್ಯಾ, ಶರಣಪ್ಪಮುತ್ಯಾ, ಕಾಶಿಬಾಯಿ ಅಮ್ಮನವರು, ಆನಂದ ಶರಣರು, ಸಂಗಮೇಶ ಶರಣರು, ಕಾಶಿರಾಯ ದೇಸಾಯಿ, ಗುರುಮೂರ್ತಿ ಹಿರೇಮಠ, ಮಹಾದೇವಿ ಹಾವಿನಾಳ, ಮಲ್ಲಣ್ಣ ಶರಣರು, ಭೀಮಣ್ಣ ಇಂಗಳಗಿ, ಗುರು ಶರಣರು, ಸಿದ್ದಣ್ಣ ಶರಣರ, ಶಾಂತಗೌಡ ಬಿರಾದಾರ, ಶ್ರೀಕಾಂತ ಬಿರಾದಾರ, ಮಲ್ಲಣ್ಣ ಇಂಗಳಗಿ, ಗುರುಮೂರ್ತಿ ಹಿರೇಮಠ, ಸಾಹಿಲ್ ಮುರಾಳ ಪಾಲ್ಗೊಂಡಿದ್ದರು.

ರಾಜು ಗುಬ್ಬೇವಾಡ, ಬಸನಗೌಡ ಬಿರಾದಾರ ಅವರು ಸಂಗೀತ ಸೇವೆ ಸಲ್ಲಿಸಿದರು. ಶರಣಗೌಡ ಪೊಲೀಸ್‌ಪಾಟೀಲ ಸ್ವಾಗತಿಸಿದರು. ಈರಣ್ಣ ಶರಣರ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net