

ಇಂಡಿ: ಭೀಮಾನದಿ ಪಾತ್ರದಲ್ಲಿ ಹಲವು ಸಂತ, ಮಹಾಂತರು, ಕವಿಗಳು, ಸಾಹಿತಿಗಳು ಆಗಿ ಹೋಗಿದ್ದಾರೆ. ಭೀಮಾನದಿ ಈ ಭಾಗದ ಪುಣ್ಯ ನದಿಯಾಗಿದ್ದು, ‘ಭೀಮಾತೀರದ ಹಂತಕರು’ ಎಂಬ ಪದ ಬಳಸುವ ಮೂಲಕ ಮಾಧ್ಯಮಗಳು ಭೀಮೆಗೆ ಅಪಮಾನ ಮಾಡುವ ಕಾರ್ಯಮಾಡುತ್ತಿವೆ ಎಂದು ಕರವೇ ತಾಲೂಕು ಅಧ್ಯಕ್ಷ ಬಾಳು ಮುಳಜಿ ಆರೋಪಿಸಿದರು.
ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭೀಮಾತೀರದ ಹಲಸಂಗಿ ಸಿಂಪಿ ಲಿಂಗಣ್ಣ, ಮಧುರಚೆನ್ನರು ನಾಡಿಗೆ ಅಪಾರ ಕೊಡುಗೆ ಕೊಟ್ಟಿದ್ದಾರೆ. ಬಂಥನಾಳದ ಸಂಗನಬಸವ ಶಿವಯೋಗಿಗಳು, ತ್ರಿವಿಧ ದಾಸೋಹದ ಅಗರಖೇಡದ ಶ್ರೀರಂಗರು ಸೇರಿ ಭೀಮೆ ತೀರ ಸಾಕಷ್ಟು ಖ್ಯಾತ ಸಾಹಿತಿಗಳಿಗೆ ಜನ್ಮ ನೀಡಿದೆ. ಮಾಧ್ಯಮಗಳು ಭೀಮಾತೀರ ಎಂಬ ಪದ ಬಳಕೆ ಮಾಡುವುದು ಸೂಕ್ತವಲ್ಲ. ಒಳ್ಳೆ ಕೆಲಸಕ್ಕೆ ಭೀಮಾತೀರ ಎಂದು ಬಳಸಿ, ಆದರೆ ಕೆಟ್ಟ ವಿಷಯಕ್ಕೆ ಬಳಸುವುದು ಸೂಕ್ತವಲ್ಲ ಎಂದು ಮನವಿ ಮಾಡಿದರು.
ಮಹೇಶ ಹೂಗಾರ, ಪ್ರಶಾಂತ ಲಾಳಸಂಗಿ, ಪ್ರದೀಪ ಕರಜಗಿ, ಯಮನಪ್ಪ ಕೂಡಿಗನೂರ, ಮಹಾವೀರ ಕಾಮನಕೇರಿ, ಶಿವಾನಂದಯ್ಯ ಲಕ್ಕುಂಡಿಮಠ, ಮಲ್ಲು ಚಾಕುಂಡಿ, ಶ್ರೀಶೈಲ ಮದರಿ, ಅಪ್ಪು ಪ್ಯಾಟಿ, ಭೀಮಾಶಂಕರ ಆಳೂರ, ಆನಂದ ಕ್ಷತ್ರಿ, ರವಿ ಹೂಗಾರ, ರೇವಣಸಿದ್ಧ ಅವರಾದಿ, ಸಂತೋಷ ಪಾಟೀಲ, ರಾಹುಲ್ ಮರಗೂರ, ಶಿವರಾಜ ಪಾಟೀಲ, ಮಹಾದೇವ ಬಗಲಿ ಪಾಲ್ಗೊಂಡಿದ್ದರು.