ಪೂಜೆ ನೆರವೇರಿಸಿದ ಮಹಿಳೆಯರು

sri vvv
ಶೃಂಗೇರಿ ಶ್ರೀ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ವರಲಕ್ಷ್ಮೀಗೆ ವಿಶೇಷ ಅಲಂಕಾರ ಮಾಡಲಾಯಿತು.
Published on

ಶೃಂಗೇರಿ: ತಾಲೂಕಿನಲ್ಲಿ ವರಲಕ್ಷ್ಮೀ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಮಹಿಳೆಯರು ಕಲಶದ ಮೇಲೆ ಲಕ್ಷ್ಮೀದೇವಿಯ ಮುಖವನ್ನು ಪ್ರತಿಷ್ಠಾಪಿಸಿ ರೇಷ್ಮೆ ಸೀರೆ ಹಾಗೂ ಬಂಗಾರ ತೊಡಿಸಿ, ವಿವಿಧ ಪುಷ್ಪಗಳಿಂದ ಅಲಂಕರಿಸಿದರು.

ವರಲಕ್ಷ್ಮೀ ಸ್ತೋತ್ರಗಳನ್ನು ಪಠಿಸಿ, ತಾಂಬೂಲ ಹಾಗೂ ನೈವೇದ್ಯ ಸಮರ್ಪಿಸಿ ಪೂಜೆ ನೆರವೇರಿಸಿದರು. ಲಕ್ಷ್ಮೀದೇವಿ ಮುಂದೆ ಇರಿಸಿದ ಪವಿತ್ರ ದಾರವನ್ನು ಕೈಗೆ ಕಟ್ಟಿಕೊಂಡು ಪೂಜೆಯಲ್ಲಿ ಭಾಗವಹಿಸಿದ ಸುಮಂಗಲಿಯರಿಗೆ ಅರಿಶಿಣ, ಕುಂಕುಮ ಸಮರ್ಪಿಸಿದರು. ಮಧ್ಯಾಹ್ನದ ಭೋಜನಕ್ಕೆ ಪಾಯಸ, ಸಿಹಿಕಡಬು, ಪಲ್ಯ, ಸಾಂಬಾರು, ಚಿತ್ರಾನ್ನ ಖಾದ್ಯವನ್ನು ಕುಟುಂಬ ಸಮೇತ ಸವಿದರು.
ಪಟ್ಟಣದ ಶ್ರೀ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಜಿಎಸ್‌ಬಿ ಸಮಾಜದವರು, ಶ್ರೀ ವಿಶ್ವಕರ್ಮ ಸಮುದಾಯ ಮಹಿಳೆಯರು ಶ್ರೀ ವಿಶ್ವಕರ್ಮ ಸಭಾಂಗಣದಲ್ಲಿ ವರಲಕ್ಷ್ಮೀವ್ರತ ನೆರವೇರಿಸಿದರು.
ಶ್ರೀ ಶಾರದಾ ಮಠದಲ್ಲಿ ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿ ಸಂಜೆ ಗಜಲಕ್ಷ್ಮೀ ಪೂಜೆ ಸಲ್ಲಿಸಿದ ಬಳಿಕ ಶ್ರೀ ವರಲಕ್ಷೀವ್ರತ ನೆರವೇರಿಸಿದರು. ಮಠದ ಪುರೋಹಿತರು ಸುವಾಸಿನೀ ಪೂಜೆ ನೆರವೇರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net