

ನವೀನ್ ಚಂದ್ರಶೆಟ್ಟಿ ಆನೇಕಲ್: ಕರೊನಾ ಲಾಕ್‌ಡೌನ್ ನಡುವೆ ನರೇಗಾ ಯೋಜನೆ ಸದುಪಯೋಗಪಡಿಸಿಕೊಂಡ ಕರ್ಪೂರು ಗ್ರಾಪಂ ವ್ಯಾಪ್ತಿಯ ರಾಚಮಾನಹಳ್ಳಿಯ ಆಂಜನೇಯ ಮಹಿಳಾ ಸಂಘದ ಮಹಿಳೆಯರು ಕೃಷಿಹೊಂಡ ನಿರ್ಮಿಸಿದ್ದಾರೆ. 20 ಅಡಿಗೂ ಹೆಚ್ಚು ಆಳದ ಹೊಂಡವನ್ನು 20 ದಿನಗಳಲ್ಲಿ ನಿರ್ಮಿಸಿದ್ದು ವಿಶೇಷ.
ತಾಪಂ ಮಾರ್ಗದರ್ಶನದಲ್ಲಿ ಗ್ರಾಪಂಗಳು ವಿವಿಧ ಹಂತದಲ್ಲಿ ಕೈಗೊಂಡ ಪರಿಸರಸ್ನೇಹಿ ಕಾರ್ಯಕ್ರಮಗಳಿಂದಾಗಿ ಬರಡಾಗಿದ್ದ ಸ್ಮಶಾನ, ಕೆರೆ ಅಂಗಳ, ಸರ್ಕಾರಿ ಜಾಗಗಳಲ್ಲಿ ಗಿಡಗಳು ನಳನಳಿಸುತ್ತಿವೆ. ಇದೇ ಯೋಜನೆಯಲ್ಲಿ ಮಹಿಳಾ ಸಂಘದ ಸದಸ್ಯರು ಕೃಷಿ ಹೊಂಡ ನಿರ್ಮಾಣ ಮಾಡಿ ಮಾದರಿಯೆನಿಸಿದ್ದಾರೆ.
ಆಂಜನೇಯ ಮಹಿಳಾ ಸಂಘದ 15 ಮಹಿಳೆಯರು ಇಪ್ಪತ್ತು ದಿನ ಮಣ್ಣು ತೆಗೆದು 20 ಅಡಿ ಆಳದ ಕೃಷಿ ಹೊಂಡ ನಿರ್ಮಿಸಲು ತಾಪಂ ಅಧಿಕಾರಿಗಳು ಹಾಗೂ ಕರ್ಪೂರು ಗ್ರಾಪಂ ಅಧಿಕಾರಿಗಳ ಸಹಕಾರ ನೀಡಿದ್ದಾರೆ. ಉಷಾ, ಮಹಿಳಾ ಸಂಘದ ಸದಸ್ಯೆ ಶಾಲೆಗಳ ಆವರಣಗಳು, ಮೈದಾನಗಳಲ್ಲಿ ಗಿಡ ನೆಟ್ಟು ವಿದ್ಯಾರ್ಥಿಗಳಿಗೆ ದತ್ತು ನೀಡುವ ಯೋಜನೆಯನ್ನು ಬಿಇಒಗಳ ಜತೆಗೂಡಿ ಅನುಷ್ಠಾನ ಮಾಡಲಾಗುತ್ತಿದೆ. ಉದ್ಯೋಗಖಾತ್ರಿ ಯೋಜನೆಯಡಿ ಪ್ರತಿದಿನ 275 ರೂ., ಹಣವನ್ನು ಮಹಿಳೆಯರು ಸಂಪಾದಿಸುವ ಮೂಲಕ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ. ದೇವರಾಜೇಗೌಡ, ತಾಪಂ ಇಒ ಲಾಕ್‌ಡೌನ್ ನಡುವೆ ಉದ್ಯೋಗ ಇಲ್ಲದೆ ಹಲವರು ಪರದಾಡುತ್ತಿದ್ದು, ನಾವು ಉದ್ಯೋಗಖಾತ್ರಿ ಯೋಜನೆ ಸದುಪಯೋಗಪಡಿಸಿಕೊಂಡು ಜೆಸಿಬಿ ಬಳಸದೆ ಮಹಿಳೆಯರೇ ಕೆಲಸ ಮಾಡಿದ್ದೇವೆ. ಮಂಗಳಾ, ಮಹಿಳಾ ಸಂಘದ ಸದಸ್ಯೆ