'ಮದ್ವೆಯಾಗಿ 2 ಮಕ್ಕಳಿರುವ ವ್ಯಕ್ತಿಯನ್ನು ನಾನು ವಿವಾಹವಾಗಿದ್ದೇ ತಪ್ಪು' ಎಂದು ಬರೆದಿಟ್ಟು ಆತ್ಮಹತ್ಯೆ!

Suicide
Published on

ಮೈಸೂರು: ನನ್ನ ಸಾವಿಗೆ ನನ್ನ ಪತಿಯ ಮೊದಲನೇ ಪತ್ನಿ ಹಾಗೂ ಆಕೆಯ ತಾಯಿ-ತಂಗಿಯೇ ಕಾರಣ ಎಂದು ಬರೆದಿಟ್ಟು ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೈಸೂರಿನ ತಾವರೆಕಟ್ಟೆ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ವಿಜಯಲಕ್ಷ್ಮಿ (25) ಆತ್ಮಹ್ಯೆ ಮಾಡಿಕೊಂಡಿರುವ ಮಹಿಳೆ. ಹನ್ನೊಂದು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಈಕೆ, ದಾಂಪತ್ಯ ಜೀವನಕ್ಕೆ ಒಂದು ವರ್ಷ ತುಂಬುವುದರೊಳಗೇ ಬದುಕಿಗೆ ವಿದಾಯ ಹೇಳಿದ್ದಾಳೆ. ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮೈಸೂರಿನ ಚಾಮುಂಡಿಬೆಟ್ಟದ ನಿವಾಸಿ ಸೋಮು ಎಂಬಾತನನ್ನು ಪ್ರೀತಿಸಿ ಮದುವೆ ಮಾಡಿಕೊಂಡಿದ್ದ ವಿಜಯಲಕ್ಷ್ಮಿ, ಕೊನೆಗೆ ಅದೇ ಕಾರಣಕ್ಕೆ ಪಶ್ಚಾತ್ತಾಪ ಪಟ್ಟಿದ್ದಾಳೆ. ಸೋಮುಗೆ ಈಗಾಗಲೇ ಮದುವೆಯಾಗಿ ಮಕ್ಕಳಿದ್ದರೂ ನಾನು ಮದುವೆಯಾದೆ. ಒಂದು ಮದುವೆಯಾಗಿ 2 ಮಕ್ಕಳಿರುವ ವ್ಯಕ್ತಿಯನ್ನು ನಾನು ಮದುವೆಯಾಗಿದ್ದೇ ದೊಡ್ಡ ತಪ್ಪು ಎಂದು ಡೆತ್​ನೋಟ್​ನಲ್ಲಿ ಉಲ್ಲೇಖಿಸಿದ್ದಾಳೆ.

ಸೋಮುವಿಗೆ ಮದುವೆಯಾಗಿ, 2 ಮಕ್ಕಳಿರುವುದು ಗೊತ್ತಿದ್ದೂ ನಾನೇ ಒತ್ತಾಯಿಸಿ ಮದುವೆಯಾದೆ. ಇದರಿಂದ ಅವರಿಗೂ ನೆಮ್ಮದಿ ಇಲ್ಲ, ನನಗೂ ನೆಮ್ಮದಿ ಇಲ್ಲದಂತಾಗಿದೆ. ನನ್ನಿಂದ ತುಂಬಾ ಜನರಿಗೆ ನೋವಾಗಿದೆ, ನನ್ನನ್ನು ಕ್ಷಮಿಸಿ ಎಂದು ವಿಜಯಲಕ್ಷ್ಮಿ ಡೆತ್​​ನೋಟ್​ನಲ್ಲಿ ಬರೆದಿದ್ದಳು. ಜೊತೆಗೆ ಮೊದಲ ಪತ್ನಿ ಹಾಗೂ ಆಕೆಯ ತಾಯಿ-ತಂಗಿಯೇ ನನ್ನ ಸಾವಿಗೆ ಕಾರಣ ಎಂಬುದನ್ನೂ ವಿಜಯಲಕ್ಷ್ಮಿ ಹೇಳಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net