ಮಹಿಳೆ ಕತ್ತಿನಲ್ಲಿದ್ದ ಚಿನ್ನದ ಸರ ಕಸಿದು ಪರಾರಿ

Crime Logo
Published on

ಮೈಸೂರು: ನಗರದ ಆಲನಹಳ್ಳಿಯ ಎಸ್‌ವಿಪಿ ಬಡಾವಣೆಯಲ್ಲಿ ಮಹಿಳೆಯನ್ನು ಹಿಂಬಾಲಿಸಿಕೊಂಡು ಬಂದ ಸರಗಳ್ಳ ಆಕೆಯ ಕತ್ತಿನಲ್ಲಿದ್ದ ಚಿನ್ನದ ಕಸಿದುಕೊಂಡು ಪರಾರಿಯಾಗಿದ್ದಾನೆ.

ಬಡಾವಣೆಯ ನಿವಾಸಿ ಉಮಾದೇವಿ 10 ಗ್ರಾಂ ತೂಕದ ಚಿನ್ನದ ಸರ ಕಳೆದುಕೊಂಡಿದ್ದಾರೆ. ಮೇ 3ರಂದು ಬೇಸಿಗೆ ಶಿಬಿರದಲ್ಲಿದ್ದ ಮಗಳನ್ನು ಕರೆದುಕೊಂಡು ಉಮಾದೇವಿ ಅವರು ತೆರಳುತ್ತಿದ್ದಾಗ ಹಿಂದಿನಿಂದ ನಡೆದುಕೊಂಡು ಬಂದರ ಸರಗಳ್ಳ ಸರ ಕಿತ್ತು ಕೊಂಡು ಪರಾರಿಯಾಗಿದ್ದಾನೆ ಎಂದು ಮಹಿಳೆ ದೂರು ನೀಡಿದ್ದಾರೆ. ಮಹಿಳೆ ನೀಡಿದ ದೂರಿನ ಮೇರೆಗೆ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net