

ಕನಕಪುರ: ನಗರದ ತೊಪ್ಪಗನಹಳ್ಳಿಯಲ್ಲಿ ಮಹಿಳೆಯ ಪ್ರೆ ತಪ್ಪಿಸಿ ಸುಮಾರು ಎರಡೂವರೆ ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿದೆ. ತೊಪ್ಪಗನಹಳ್ಳಿಯ ಪುಟ್ಟಮ್ಮ (64) ಚಿನ್ನಾಭರಣ ಕಳೆದುಕೊಂಡವರು.
ರಸ್ತೆ ಬದಿ ತರಕಾರಿ ಮಾರುತ್ತಿದ್ದ ಪುಟ್ಟಮ್ಮ ಬಳಿ ಮಹಿಳೆ ಹಾಗೂ ಬಾಲಕ ದ್ವಿಚಕ್ರ ವಾಹನದಲ್ಲಿ ಬಂದು ಶಾಸ ಹೇಳುವ ನೆಪದಲ್ಲಿ ಆಕೆಗೆ ಪ್ರೆ ತಪ್ಪಿಸಿ ಮಾಂಗಲ್ಯ ಸರ ಹಾಗೂ ವಾಲೆ, ಮಾಟಿಯನ್ನು ಕಳಚಿಕೊಂಡು ಬೈಕ್ನಲ್ಲಿ ಪರಾರಿಯಾಗಿದ್ದಾರೆ. ವೃದ್ಧೆಗೆ ಪ್ರಜ್ಞೆ ಬಂದಾಗ ವಿಷಯ ಬೆಳಕಿಗೆ ಬಂದಿದ್ದು, ಗ್ರಾಮಾಂತರ ಪೊಲೀಸರು ಸ್ಥಳ ಪರಿಶೀಲಿಸಿದ್ದಾರೆ.