

ಮಂಡ್ಯ: ದಿ ವಿಝರ್ಡ್ ಗುರು ಟ್ರಸ್ಟ್ ಮತ್ತು ಮಂಡ್ಯ ರಾಯಲ್ ಚೆಸ್ ಅಕಾಡೆಮಿಯಿಂದ ನಗರದಲ್ಲಿ ಮೇ.26ರಂದು ಪ್ರತಿಭಾ ಪುರಸ್ಕಾರ ಮತ್ತು ವಾರ್ಷಿಕ ಸಂಚಿಕೆ ಬಿಡುಗಡೆ ಸಮಾರಂಭ ಆಯೋಜಿಸಲಾಗಿದೆ ಎಂದು ಟ್ರಸ್ಟ್‌ನ ಸಂಸ್ಥಾಪಕ ಕಾರ್ಯದರ್ಶಿ ಎಂ.ಎಸ್.ಚೇತನ್ ತಿಳಿಸಿದರು.
ಗಾಂಧಿಭವನದಲ್ಲಿ ಆಯೋಜಿಸಿರುವ ಸಮಾರಂಭವನ್ನು ಅಂದು ಬೆಳಗ್ಗೆ 10.30ಕ್ಕೆ ಅಬಕಾರಿ ಇಲಾಖೆಯ ಮೈಸೂರು ವಿಭಾಗದ ಡಿವೈಎಸ್‌ಪಿ ಕೆ.ಮೋಹನ್ ಉದ್ಘಾಟಿಸುವರು. ಮೈಸೂರು ಮಹಾರಾಣಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಸಿ.ಎಸ್.ಮೋಹನ್‌ಕುಮಾರ್, ಬೆಂಗಳೂರಿನ ಸಮೂಹ ಸಂಪನ್ಮೂಲ ಶಿಕ್ಷಣಾಧಿಕಾರಿ ಚಂದ್ರಕಲಾ, ಪತ್ರಕರ್ತ ನವೀನ್ ಚಿಕ್ಕಮಂಡ್ಯ, ಒಕ್ಕಲಿಗರ ವಿಕಾಸ ವೇದಿಕೆ ರಾಜ್ಯಾಧ್ಯಕ್ಷೆ ಎಚ್.ಎಲ್.ಯಮುನಾ ಭಾಗವಹಿಸುವರು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಇದೇ ಸಂದರ್ಭದಲ್ಲಿ ಜಿಮ್ನಾಸ್ಟಿಕ್ ಪಟು ಸಿಂಚನಾ, ಕಿಕ್ ಬಾಕ್ಸರ್ ಪುಷ್ಪಲತಾ, ನೆಟ್‌ಬಾಲ್ ಆಟಗಾರ್ತಿಯರಾದ ಹರ್ಷಿತಾ, ಪ್ರಿಯಾ, ಮಾನ್ಯ ಹಾಗೂ ರಾಷ್ಟ್ರೀಯ ಚೆಸ್ ಆಟಗಾರ್ತಿಯರಾದ ಎಂ.ಎಸ್.ಜ್ಞಾನವಿ, ಎಚ್.ಎಂ.ಯಧ್ವಿತಿ ಅವರನ್ನು ಸನ್ಮಾನಿಸಲಾಗುತ್ತದೆ ಎಂದು ವಿವರಿಸಿದರು.
ಟ್ರಸ್ಟ್‌ನ ಖಜಾಂಚಿ ಜಿ.ಸಿ.ರಾಕೇಶ್‌ಗೌಡ, ಚೆಸ್ ತರಬೇತುದಾರ ಸುಹೇಬ್‌ಖಾನ್ ಹಾಜರಿದ್ದರು.