ಗಾಳಿ ಮಳೆಗೆ ಗಿಡ ಮರ ಧರಾಶಾಯಿ; ಮನೆಗೆ ಹಾನಿ: ಹೆಬ್ರಿ, ಕಾರ್ಕಳ ತಾಲೂಕಿನಲ್ಲಿ ವಿದ್ಯುತ್ ವ್ಯತ್ಯಯ

web - blm - male
ಮಾಳ ಗ್ರಾಮ ಪೇರಡ್ಕ ನಿವಾಸಿ ಲೋಕೇಶ್ ನಾಯ್ಕ ಎಂಬುವರ ವಾಸ್ತವದ ಮನೆಗೆ ಗಾಳಿ ಮಳೆಗೆ ಮರ ಬಿದ್ದು ಭಾಗಶ ಹಾನಿಯಾಗಿರುವುದು.
Published on

ಕಾರ್ಕಳ: ತಾಲೂಕಿನಾದ್ಯಂತ ಸೋಮವಾರ ಸುರಿದ ಭಾರಿ ಗಾಳಿ ಮಳೆಗೆ ಅನೇಕ ಗಿಡ ಮರಗಳು ಧರಾಶಾಯಿಯಾಗಿದ್ದು, ವಿದ್ಯುತ್ ಕಂಬಗಳಿಗೂ ಹಾನಿಯಾಗಿದೆ.

ಮನೆಗೆ ಮರ ಬಿದ್ದು ಹಾನಿ

ಮಾಳ ಗ್ರಾಮ ಪೇರಡ್ಕ ನಿವಾಸಿ ಲೋಕೇಶ್ ನಾಯ್ಕ ಎಂಬುವರ ವಾಸ್ತವದ ಮನೆಗೆ ಗಾಳಿ ಮಳೆಗೆ ಮರ ಬಿದ್ದು ಭಾಗಶಃ ಹಾನಿಯಾಗಿದ್ದು, ಅಂದಾಜು 40 ಸಾವಿರಕ್ಕೂ ಅಧಿಕ ನಷ್ಟ ಉಂಟಾಗಿದೆ. ಕಾರ್ಕಳ ತಾಲೂಕಿನ ಅಜೆಕಾರು, ಶಿರ್ಲಾಲು, ಕೆರ್ವಾಶೆ ಬಳಿಯಲ್ಲಿ ರಾತ್ರಿ ಬೀಸಿದ ಭಾರಿ ಗಾಳಿಗೆ ಮರಗಳು ಧರೆಗೆ ಉರುಳಿದ ಪರಿಣಾಮ ಹತ್ತಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರಾಶಾಯಿಯಾಗಿವೆ.

ಉಭಯ ತಾಲೂಕಿನಲ್ಲಿಯೂ ವಿದ್ಯುತ್ ವ್ಯತ್ಯಯ

ಹೆಬ್ರಿ ತಾಲೂಕಿನ ಕಬ್ಬಿನಾಲೆ, ದುರ್ಗ, ಶಿವಪುರ, ನಾಡ್ಪಾಲು, ಕಾರ್ಕಳ ತಾಲೂಕಿನ ಮರ್ಣೆ, ಬೈಲೂರು, ನೂರಾಲ್ಬೆಟ್ಟು, ಮಾಳ ಚೌಕಿ, ಬೆಳ್ಮಣ್, ನಂದಳಿಕೆ, ನಿಟ್ಟೆ, ಮುಂಡ್ಕೂರು, ಬೋಳ ಸೇರಿದಂತೆ ಅನೇಕ ಕಡೆಗಳಲ್ಲಿ ವಿದ್ಯುತ್ ವ್ಯತ್ಯಯಗಳಾಗಿದೆ.

ಬದಲಿ ಮಾರ್ಗದಲ್ಲಿ ವಾಹನ ಸಂಚಾರ

ಶಿರ್ಲಾಲು ಹಾಗೂ ಹಾಡಿಯಂಗಡಿ ಬಳಿ ಬಿದ್ದಿದ್ದ ಮರಗಳನ್ನು ಕೂಡಲೇ ಮೆಸ್ಕಾಂ ಸಿಬ್ಬಂದಿ ಹಾಗೂ ಸ್ಥಳೀಯರ ಸಹಕಾರದಿಂದ ತೆರವುಗೊಳಿಸಲಾಯಿತು ಹಾಗೂ ಕೆರ್ವಾಶೆ ಸಾಗುವ ರಸ್ತೆಯಲ್ಲಿ ಅಡ್ಡದಾಗಿ ಬಿದ್ದಿದ್ದ ಬೃಹತ್ ಗಾತ್ರದ ಹಲಸಿನ ಮರ ತೆರವು ಗೊಳಿಸಲು ಹೆಚ್ಚು ಸಮಯ ಬೇಕಾಯಿತು. ಇದರಿಂದಾಗಿ ಮರದ ತೆರವು ಕಾರ್ಯ ನಡೆಯುವ ವರೆಗೆ ಸುಮಾರು ಗಂಟೆಗಳ ಕಾಲ ಕೆರ್ವಾಶೆ ಸಂಪರ್ಕಿಸುವ ವಾಹನ ಅಂಡಾರು ಶಿರ್ಲಾಲು ಬಂಗ್ಲೆಗುಡ್ಡೆ ಮೂಲಕ ಶೆಟ್ಟಿಬೆಟ್ಟು ಮಾರ್ಗವಾಗಿ ಸಂಚಾರ ನಡೆಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net