ಪತ್ನಿ ಪತ್ರವೇ ಸಿಎಂ ತಪ್ಪೊಪ್ಪಿಗೆ ಪತ್ರ

1 vikram 4 (Aravind Bellad)
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಮುಖ್ಯಮಂತ್ರಿ ಅವರ ಪತ್ನಿ ಪಾರ್ವತಿ ಸಿದ್ದರಾಮಯ್ಯ ಅವರು ಬರೆದ ಪತ್ರ, ನೀನು ಅತ್ತಂಗೆ ಮಾಡು ನಾನು ಸತ್ತಂಗೆ ಮಾಡ್ತೀನಿ ಎನ್ನುವಂತಾಗಿದೆ. ತಮ್ಮ ಪತ್ನಿ ಬರೆದ ಪತ್ರ ಸಿದ್ದರಾಮಯ್ಯನವರಿಗೇ ಗೊತ್ತಿರಲಿಲ್ಲ ಎನ್ನುವುದು ಹಾಸ್ಯಾಸ್ಪದ ಸಂಗತಿ ಎಂದು ವಿಧಾನಸಭೆ ವಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ ಟೀಕಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪಾರ್ವತಿ ಸಿದ್ದರಾಮಯ್ಯನವರ ಪತ್ರ ಬಹುಶಃ ಸಿದ್ದರಾಮಯ್ಯವರ ತಪ್ಪೊಪ್ಪಿಗೆ ಪತ್ರ ಹಾಗೂ ಮೂಡಾ ಹಗರಣದ ಒಂದು ಸ್ಪಷ್ಟತೆ ಎಂಬಂತಿದೆ. ಮುಖ್ಯಮಂತ್ರಿಗಳೇ, ತಪ್ಪೇ ಮಾಡದವರು ಪತ್ನಿಯ ನಿರ್ಧಾರ ತಿರಸ್ಕರಿಸಿ ಕಾನೂನು ಹೋರಾಟ ಮಾಡಬೇಕಿತ್ತು. ಆದರೆ ಕಳ್ಳ ತಾನು ಕದ್ದ ಮಾಲನ್ನು ವಾಪಸ್ಸು ಮಾಡಿದರೆ ನಿರಪರಾಧಿ ಆಗಿಬಿಡುವನೇ? ಎಂದು ಪ್ರಶ್ನಿಸಿದ್ದಾರೆ.
ಅಕ್ರಮವಾಗಿ ಪಡೆದಿದ್ದ 14 ನಿವೇಶನಗಳನ್ನು ವಾಪಸ್ಸು ಮಾಡುವ ಉದಾರತನ ತೋರಿಸುತ್ತಿರುವ ನಿಮಗೆ, ಇದು ಸರ್ಕಾರದ ಆಸ್ತಿ. ಇಂದಲ್ಲ ನಾಳೆ ನ್ಯಾಯಾಲಯದ ಆದೇಶದಂತೆ ಹಿಂದುರಿಗಿಸಲೇಬೇಕು ಎಂಬುದು ತಿಳಿದಿರಬೇಕಲ್ಲವೇ? ನೀವು ಹೇಗೆ ಸೈಟು ವಾಪಸ್​ ನೀಡಿದ್ದೀರೋ, ಅದೇ ಮಾದರಿಯಲ್ಲಿ ರಾಜೀನಾಮೆ ನೀಡುವ ಪರಿಸ್ಥಿತಿ ಸಹ ನಿರ್ಮಾಣವಾಗಲಿದೆ. ತನಿಖೆ ಎದುರಿಸಿ ನೀವು ರಾಜೀನಾಮೆ ನೀಡುವವರೆಗೂ ನಮ್ಮ ಹೋರಾಟ ನಿಲ್ಲದು ಎಂದು ಅರವಿಂದ ಬೆಲ್ಲದ ಎಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net