ಮೂಡಲಗಿ: ಪತ್ನಿ ಕೊಂದ ಪತಿಯ ಬಂಧನ

Arrest Kaidhi
Published on

ಮೂಡಲಗಿ: ತಾಲೂಕಿನ ವಡೇರಹಟ್ಟಿ ಗ್ರಾಮದಲ್ಲಿ ಪತ್ನಿಯನ್ನು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ ಘಟನೆ ಭಾನುವಾರ ಜರುಗಿದೆ. ನೀಲವ್ವ ಲಕ್ಷ್ಮಣ ಮದ್ರಾಸಿ (65) ಕೊಲೆಯಾದ ಮಹಿಳೆ. ಲಕ್ಷ್ಮಣ ರೇವಪ್ಪ ಮದ್ರಾಸಿ ಕೊಲೆ ಮಾಡಿದ್ದು, ಆತನನ್ನು ಬಂಧಿಸಲಾಗಿದೆ.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಗೋಕಾಕದ ಪ್ರಭಾರ ಡಿವೈಎಸ್ಪಿ ಮನೋಜ ಕುಮಾರ ನಾಯ್ಕ, ಸಿಪಿಐ ವೆಂಕಟೇಶ ಮುರನಾಳ, ಪಿಎಸ್‌ಐ ಮಲ್ಲಿಕಾರ್ಜುನ ಸ್ಥಳಕ್ಕೆ ಭೇಟಿ ಪರಿಶೀಲಿಸಿದರು. ಮೂಡಲಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net