ಇಡೀ ದೇಶ ರಾಹುಲ್ ಗಾಂಧಿ ಪರವಿದೆ

whole country is in favor of Rahul Gandhi
Published on

ಶಿಗ್ಗಾಂವಿ: ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿಯವರ ವಿರುದ್ಧ ಬಿಜೆಪಿ ಮುಖಂಡರ ಸೇಡಿನ ರಾಜಕಾರಣ ಖಂಡಿಸಿ ಪಟ್ಟಣದಲ್ಲಿ ತಾಲೂಕು ಕಾಂಗ್ರೆಸ್ ಘಟಕದಿಂದ ಬುಧವಾರ ಮೌನ ಪ್ರತಿಭಟನೆ ನಡೆಸಲಾಯಿತು.

ಪಟ್ಟಣದ ರಾಣಿ ಚನ್ನಮ್ಮ ವೃತ್ತದಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ಮೌನ ಪ್ರತಿಭಟನೆ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ಪಕ್ಷದ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿ ನಾಯಕರು ನೀಡುವ ತೊಂದರೆ ಸಹಿಸಿಕೊಂಡು ದೇಶದ ಜನರ ಧ್ವನಿಯಾಗಿ ಕೆಲಸ ಮಾಡುವ ರಾಹುಲ್ ಗಾಂಧಿ ಅವರು ಒಂಟಿ ಅಲ್ಲ, ಅವರ ಜತೆ ನಾವಿದ್ದೇವೆ ಎನ್ನುವ ಉದ್ದೇಶದಿಂದ ಇಡೀ ದೇಶದ ಜನತೆ ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ಮೌನ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಸೋಮಣ್ಣ ಬೇವಿನಮರದ ಹೇಳಿದರು.

ಪಕ್ಷದ ಮುಖಂಡರಾದ ಶಿವಾನಂದ ರಾಮಗೇರಿ, ಶಂಭುಲಿಂಗಪ್ಪ ಆಜೂರ, ಶಿವಾನಂದ ಬಾಗೂರ, ಯಾಸೀರಖಾನ್ ಪಠಾಣ, ಎಂ.ಎನ್. ಹೊನಕೇರಿ, ಎಸ್.ಎಫ್. ಮಣಕಟ್ಟಿ, ನೂರಅಹಮ್ಮದ ಮಾಳಗಿ, ಮಂಜುನಾಥ ಮನ್ನಣ್ಣನವರ ಸೇರಿದಂತೆ ಪ್ರಮುಖರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net