ನಗರದಲ್ಲಿ ಮಾನಸಿಕ ಅಸ್ವಸ್ಥನ ಹುಚ್ಚಾಟ

111111111111111
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಮಾನಸಿಕ ಅಸ್ವಸ್ಥನೊಬ್ಬ ನಗರದಲ್ಲಿ ಬೇಕಾಬಿಟ್ಟಿಯಾಗಿ ಕಾರು ಚಲಾಯಿಸಿ ಬಸ್​, ಬೈಕ್​ಗಳಿಗೆ ಡಿಕ್ಕಿ ಹೊಡೆದ ಘಟನೆ ನಗರದಲ್ಲಿ ಭಾನುವಾರ ಬೆಳಗಿನ ಜಾವ ನಡೆದಿದೆ.
ಉತ್ತರ ಪ್ರದೇಶ ಮೂಲದ ದಿಲೀಪ್​ ಯಾದವ ಎಂಬಾತನೇ ಈ ಟನೆಗೆ ಕಾರಣ. ಮಾನಸಿಕ ಅಸ್ವಸ್ಥ ದಿಲೀಪ್​ ಬೆಂಗಳೂರಿನಲ್ಲಿ ಐಟಿ ನೌಕರ. ನಿಮ್ಹಾನ್ಸ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಈತ ಮನೆಯಲ್ಲಿ ಹೇಳದೆ 2-3 ದಿನಗಳ ಹಿಂದೆ ಧಾರವಾಡಕ್ಕೆ ಆಗಮಿಸಿದ್ದಾನೆ. ಈತನನ್ನು ಪತ್ತೆ ಹಚ್ಚಿಕೊಂಡು ಶನಿವಾರ ಆತನ ಪತ್ನಿ ಸಹ ನಗರಕ್ಕೆ ಆಗಮಿಸಿದ್ದಾಳೆ. ಆದರೆ ಭಾನುವಾರ ಬೆಳಗಿನ ಜಾವ ಜುಬಿಲಿ ವೃತ್ತದಲ್ಲಿ ಮೂರು ಸುತ್ತು ಕಾರು ಚಲಾಯಿಸಿ ಬಸ್​ ಹಾಗೂ ಬೈಕ್​ಗಳಿಗೆ ಡಿಕ್ಕಿ ಹೊಡೆದಿದ್ದಾನೆ.
ಘಟನೆ ಅರಿತು ಜನರು ಸೇರುತ್ತಿದ್ದಂತೆ ಕಾರಿನ ಮೇಲೆ ಹತ್ತಿ ಹುಚ್ಚಾಟ ಮೆರೆದಿದ್ದಾನೆ. ಕೂಡಲೇ ಮಾಹಿತಿ ತಿಳಿದ ಆತನ ಪತ್ನಿ ಸ್ಥಳಕ್ಕೆ ಆಗಮಿಸಿ ಕಾರಿನಿಂದ ಕೆಳಗಿಳಿಸಿ ಡಿಮ್ಹಾನ್ಸ್​ ಆಸ್ಪತ್ರೆಗೆ ಸೇರಿಸಿದ್ದಾಳೆ. ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net