

ಬೆಳ್ವೆ: ಬೆಳ್ವೆ ಮರೂರು ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ಬೆಂಗಳೂರು ಉದ್ಯಮಿ ಆಶಾ ಕೆ.ಕೃಷ್ಣ ಎಸ್.ಜಿ. ಹಾಗೂ ಕುಟುಂಬದವರ ಸೇವೆಯಾಗಿ ಅಶ್ವತ್ಥ ಸ್ಥಾಪನ ಉಪನಯನ ವಿವಾಹ ಮಹೋತ್ಸವ ಕಾರ್ಯಕ್ರಮ ಶ್ರೀನಿವಾಸ ಬಾಯರಿ ಮರೂರು ಹಾಗೂ ಸಹ ಅರ್ಚಕ ವೃಂದದ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸೋಮವಾರ ನಡೆಯಿತು.
ಗಣಪತಿ ಹೋಮ, ಸಂಜೆ ಸ್ಥಾನ ಶುದ್ಧಿ, ರಾಕ್ಷ್ನೋ ಹೋಮ, ವಾಸ್ತುಪೂಜೆ ಬಲಿ, ದಿಗ್ಬಲಿ ಇತ್ಯಾದಿ ಕಾರ್ಯಕ್ರಮಗಳು ಭಾನುವಾರ ನಡೆಯಿತು. ಸೋಮವಾರ ಗುರು ಗಣಪತಿ ಪೂಜೆ, ಸ್ವಸ್ತಿ ಪುಣ್ಯಾಹ ವಾಚನ, ಮಹಾ ಸಂಕಲ್ಪ, ಋತ್ವಿಗ್ವರ್ಣನೆ, ಅಶ್ವತ್ಥ ಪ್ರತಿಷ್ಠೆ, ಪವವಾನ ಹೋಮ, ಸಂಹಿತಾ ಪಾರಾಯಣ, ನವಗ್ರಹ ಹೋಮ, ಅಶ್ವತ್ಥೋಪನಯನ, ವಿವಾಹ ಮಹೋತ್ಸವ, ಕಲ್ಪೋಕ್ತ ಪೂಜೆ, ಮಹಾಮಂಗಳಾರತಿ, ದಂಪತಿ ಪೂಜಾ, ಆಚಾರ್ಯ ಪೂಜೆ, ತೀರ್ಥಪ್ರಸಾದ, ಭೋಜನ ಪ್ರಸಾದ ನಡೆಯಿತು. ದೇವಳದ ಟ್ರಸ್ಟ್‌ನ ಪದಾಧಿಕಾರಿಗಳು, ಸೇವಾಕರ್ತರಾದ ಬೆಂಗಳೂರು ಉದ್ಯಮಿ ಆಶಾ ಕೆ. ಕೃಷ್ಣ ಎಸ್.ಜಿ ಹಾಗೂ ಕುಟುಂಬದವರು, ಭಕ್ತರು ಪಾಲ್ಗೊಂಡಿದ್ದರು.