

ವಿಜಯವಾಣಿ ಸುದ್ದಿಜಾಲ ಧಾರವಾಡ
ಸಾಮಾಜಿಕ ಕಳಕಳಿ ಹೊಂದಿದ ಲಯನ್ಸ್ ಕ್ಲಬ್ನಂತಹ ಸಂಘ-ಸಂಸ್ಥೆಗಳಿಗೆ ಸದಸ್ಯರು ಸೇರಿ ಉಳ್ಳವರು ದಾನ ನೀಡುವ ಮೂಲಕ ಸಮಾಜದ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದು ಲಯನ್ಸ್ ಜಿಲ್ಲಾ ಗವರ್ನರ್ ಮನೋಜ ಮಾನೇಕ್ ಮನವಿ ಮಾಡಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಲಯನ್ಸ್ ಕ್ಲಬ್ನ ವಾರ್ಷಿಕೊತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಮಾಜದ ಆರ್ಥಿಕ ಸ್ಥಿತಿಗತಿಯಲ್ಲಿ ಏರಿಳಿತ ಸಮಾನ್ಯ. ಈ ನಿಟ್ಟಿನಲ್ಲಿ ಸಮಾಜದ ಸಮತೋಲನಕ್ಕಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳುವ ಸಂಘ-ಸಂಸ್ಥೆಗಳಿಗೆ ಉಳ್ಳವರು ದಾನ ಮಾಡುವ ಮೂಲಕ ಬಡ ಜನರ ಹಾಗೂ ಅಶಕ್ತ ಸಮುದಾಯಕ್ಕೆ ಬಲ ನೀಡುವ ಕೆಲಸ ಮಾಡಬೇಕು ಎಂದರು.
ಧಾರವಾಡ ಲಯನ್ಸ್ ಕ್ಲಬ್ 60 ವರ್ಷಗಳಿಂದ ಸಮಾಜದ ಉನ್ನತಿಗೆ ಸೇವೆ ಸಲ್ಲಿಸುತ್ತಿದೆ. ಪ್ರಸ್ತುತ ಸಂದರ್ಭದಲ್ಲೂ ಸಮಾಜದಲ್ಲಿರುವ ಮೂಲಭೂತ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿ. ಸರ್ಕಾರಿ ಶಾಲೆ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಶೌಚಗೃಹ ಸೌಲಭ್ಯ ಕಲ್ಪಿಸುವಲ್ಲಿ ಹೆಚ್ಚು ಕಾರ್ಯೋನ್ಮುಖವಾಗಲಿ. ಸಾಮಾಜಿಕ ಕಳಕಳಿಯ ಇಂತಹ ಸಂಸ್ಥೆಗಳಿಗೆ ಯುವಕರು ಸದಸ್ಯರಾಗುವ ಮೂಲಕ ಗ್ರಾಮೀಣಾಭಿವೃದ್ಧಿಗೆ ಶ್ರಮಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕ್ಲಬ್ ಅಧ್ಯಕ್ಷ ಗುರುರಾಜ ಪಿಸೆ ಮಾತನಾಡಿದರು. ಕವಿತಾ ಅಂಗಡಿ ಸೇವಾ ಕಾರ್ಯಗಳನ್ನು ವಿವರಿಸಿದರು. ಕ್ಲಬ್ ನೂತನ ಸದಸ್ಯರಾದ ಡಾ. ಅಶ್ವಿನ್ ಕುಲಕರ್ಣಿ, ರಶ್ಮಿ ಭಾರದ್ವಾಜ, ಡಾ. ರಮೇಶ ಹೆಬ್ಬಳ್ಳಿ, ಡಾ. ಶ್ರೇಯಾ ಪಾಸ್ತೆ, ಜಯಂತ ಇಟಗಿ, ಸಂತೋಷ ಮೇಸ್ತ್ರಿ, ಷಣ್ಮುಖ ಸವಣೂರ, ಗಿರೀಶ ಅಂಗಡಿ ಅವರಿಗೆ ಜಿಲ್ಲಾ ಗವರ್ನರ್ ಪ್ರತಿಜ್ಞಾ ವಿಧಿ ಬೋಧಿಸಿದರು.
ಹರ್ಷ ದೇಸಾಯಿ, ಅರವಿಂದ ಹೆಬಸೂರ, ಖಜಾಂಚಿ ವೃಷಭ ಕರೋಲೆ, ಆರ್.ಕೆ. ಹೆಗಡೆ, ಮುಕುಂದ ಹೆಬ್ಳೀಕರ, ಶೈಲಾ ಕರಗುದರಿ, ರಾಜೀವ ಪಾಟೀಲ ಕುಲಕರ್ಣಿ, ಡಾ. ಅನಿರುದ್ಧ ಕುಲಕರ್ಣಿ, ವಿನಾಯಕ ಜೋಶಿ, ಇತರರು ಇದ್ದರು.