ಕೆರೂರಲ್ಲಿ ಕಾಮದಹನ ಸಂಪನ್ನ

The wealth of lust in Kerur
The wealth of lust in Kerur
Published on

ಕೆರೂರ: ಪಟ್ಟಣದ ಹೊಸಪೇಟೆ ಬಡಾವಣೆಯ ಬನಶಂಕರಿದೇವಿ ದೇವಸ್ಥಾನದ ಆವರಣದಲ್ಲಿ ಶನಿವಾರ ಹೋಳಿ ಹುಣ್ಣಿಮೆ ಅಂಗವಾಗಿ ಕಾಮದಹನ ಮಾಡಲಾಯಿತು.

ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿದ ರತಿ ಮನ್ಮಥರ ಮೂರ್ತಿಗೆ ವಿಠ್ಠಲಗೌಡ ಗೌಡರ ಹಾಗೂ ಗೋಪಾಲ ಗೌಡರ ಪರಿವಾರದವರು ಪೂಜೆ ಸಲ್ಲಿಸಿದ ನಂತರ ಕಾಮದಹನಕ್ಕೆ ಚಾಲನೆ ನೀಡಲಾಯಿತು. ದಹನದ ನಂತರ ಗೌಡರ ಮನೆಯಲ್ಲಿ ಮುತ್ತೈದೆಯರಿಗೆ ಉಡಿ ತುಂಬ ಕಾರ್ಯಕ್ರಮ ಜರುಗಿತು. ದೇವಸ್ಥಾನದ ಆವರಣದಲ್ಲಿ ಎಲ್ಲಿ ನೋಡಿದರೂ ಹುಡುಗರಿಂದ ಹಲಗೆ ಸಪ್ಪಳ ಜೋರಾಗಿತ್ತು. ಭಾನುವಾರ ಪಟ್ಟಣದಲ್ಲಿ ಬಣ್ಣದಾಟ ನಡೆಯಲಿದೆ.

ದೇವಾಂಗ ಸಮಾಜದ ಅಧ್ಯಕ್ಷ ಸಂಕಣ್ಣ ಹೊಮನಿ, ಮಾರುತಿ ಸೂಳಿಕೇರಿ, ಉಮೇಶ ದಾಸಮನಿ, ರವಿ ಬೋರಣ್ಣವರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net