

ಆಯನೂರು: ರೈತರ ಹಲವು ದಿನಗಳ ಹೋರಾಟದ ಬಳಿಕ ದೊಡ್ಡದಾನವಂದಿ ಗ್ರಾಮದ ವೀರಶೆಟ್ಟಿ ಕೆರೆಗೆ ಹೊಸಳ್ಳಿ ಏತ ನೀರಾವರಿ ಯೋಜನೆ ನೀರು ಹರಿಯಿತು. ಅಧಿಕಾರಿಗಳ ಸಮ್ಮುಖದಲ್ಲಿ ಜೆಸಿಬಿ ಮೂಲಕ ಕಾಲುವೆ ತೆಗೆದು ನೀರು ಹರಿಸಿದರು. ಇದರಿಂದ 180 ಎಕರೆಯಷ್ಟು ಜಮೀನಿಗೆ ಅನುಕೂಲವಾಗಿದೆ. ಈಗಿರುವ ಒಂದೂವರೆ ಇಂಚಿನ ಪೈಪ್ ತೆಗೆದು 5 ಇಂಚಿನ ಪೈಪ್ ಹಾಕುವಂತೆ ರೈತರು ಹೇಳಿದ್ದಾರೆ. ಎಪಿಎಂಸಿ ಮಾಜಿ ಅಧ್ಯಕ್ಷ ಆಯನೂರು ಶಿವಾನಂದಪ್ಪ, ಇಂಜಿನಿಯರ್ ಪ್ರದೀಪ್‌ಕುಮಾರ್, ರೈತರಾದ ಕೃಷ್ಣಮೂರ್ತಿ, ಬಲರಾಮಪ್ಪ, ಚಂದ್ರಪ್ಪ, ಪರಶುರಾಮ ಇತರರಿದ್ದರು.