ಗೋಡೆ ಕುಸಿದು ಇಬ್ಬರು ಕುರಿಗಾಹಿಗಳ ಸಾವು

Man Death 29 Feb 20
Published on

ಹಿರೇಬಾಗೇವಾಡಿ: ಸಮೀಪದ ಕಮಕಾರಹಟ್ಟಿಯ ಜಮೀನಿನಲ್ಲಿ ಭಾನುವಾರ ಮಧ್ಯಾಹ್ನ ಶೆಡ್ ಕುಸಿದು ಬಿದ್ದು ಕೊಂಡಸಕೊಪ್ಪ ಗ್ರಾಮದ ಇಬ್ಬರು ಕುರಿಗಾಹಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಲ್ಲಪ್ಪ ಸಿದ್ದಪ್ಪ ಸಾಂಬ್ರೆಕರ ಮತ್ತು ಪರಶುರಾಮ ಗಂಗಪ್ಪ ಶಹಾಪುರಕರ ಮೃತಪಟ್ಟವರು.

ಕುರಿ ಮೇಯಿಸಲು ಹೋಗಿದ್ದ ಇಬ್ಬರು ಮಳೆ ಸುರಿಯಲು ಆರಂಭಿಸಿದ್ದರಿಂದ ಹೊಲದಲ್ಲಿನ ತಗಡಿನ ಶೆಡ್‌ನಲ್ಲಿ ಆಶ್ರಯ ಪಡೆದಿದ್ದರು. ರಭಸದ ಗಾಳಿಗೆ ಶೆಡ್ ತಗಡು ಹಾರಿ ಹೋಗಿ ಗೋಡೆೆ ಕುಸಿದು ಅವಘಡ ಸಂಭವಿಸಿದೆ. ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಲ್ಲಪ್ಪ ಸಿದ್ದಪ್ಪ ಸಾಂಬ್ರೆಕರ ಮತ್ತು ಪರಶುರಾಮ ಗಂಗಪ್ಪ ಶಹಾಪುರಕರ ಮೃತಪಟ್ಟವರು. ಕುರಿ ಮೇಯಿಸಲು ಹೋಗಿದ್ದ ಇಬ್ಬರು ಮಳೆ ಸುರಿಯಲು ಆರಂಭಿಸಿದ್ದರಿಂದ ಹೊಲದಲ್ಲಿನ ತಗಡಿನ ಶೆಡ್‌ನಲ್ಲಿ ಆಶ್ರಯ ಪಡೆದಿದ್ದರು. ರಭಸದ ಗಾಳಿಗೆ ಶೆಡ್ ತಗಡು ಹಾರಿ ಹೋಗಿ ಗೋಡೆೆ ಕುಸಿದು ಅವಘಡ ಸಂಭವಿಸಿದೆ. ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net