ಶರಣರ ವಚನಗಳು ಬದುಕಿಗೆ ದಾರಿದೀಪ

Dvd Machideva
ಮಲದಕಲ್ ಗ್ರಾಮದಲ್ಲಿ ಮಡಿವಾಳ ಮಾಚಿದೇವ ಜಯಂತಿ ಆಚರಿಸಲಾಯಿತು. ಪ್ರಮುಖರಾದ ರಾಮಣ್ಣ ಮಡಿವಾಳ, ಚನ್ನಯ್ಯ ತಾತ, ಭೀಮರೆಡ್ಡಿ ನಾಯಕ, ಉಮ್ಮಣ್ಣ ನಾಯಕ, ಬಸವರಾಜ, ಶಿವಪ್ಪ, ಬೂದಯ್ಯ, ಶರಣಬಸವ ಇತರರಿದ್ದರು.
Published on

ದೇವದುರ್ಗ: ಬಸವಾದಿ ಶರಣರು ರಚಿಸಿರುವ ವಚನಗಳು ಜನರ ಬದುಕಿಗೆ ದಾರಿದೀಪಗಳಾಗಿವೆ. ಅವರು ತೋರಿದ ಸನ್ಮಾರ್ಗದಲ್ಲಿ ಮುನ್ನಡೆದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಮಡಿವಾಳ ಮಾಚಿದೇವ ಸಂಘದ ಗಬ್ಬೂರು ಹೋಬಳಿ ಘಟಕ ಅಧ್ಯಕ್ಷ ರಾಮಣ್ಣ ಮಡಿವಾಳ ಹೇಳಿದರು.

ತಾಲೂಕಿನ ಮಲದಕಲ್ ಗ್ರಾಮದಲ್ಲಿ ಆಯೋಜಿಸಿದ್ದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು. ಬಸವಾದಿ ಪ್ರಮಥರು ಸಮಾಜದ ಅಂಕುಡೊಂಕು ತಿದ್ದುವ ಕೆಲಸ ಮಾಡಿದ್ದಾರೆ.

ಬಸವಣ್ಣವರ ಒಡನಾಡಿಯಾಗಿದ್ದ ಮಡಿವಾಳ ಮಾಚಿದೇವ ಕಾಯಕ ಯೋಗಿಯಾಗಿದ್ದರು. ಕಾಯಕದ ಮೂಲಕವೇ ಆದರ್ಶವನ್ನು ಸಮಾಜಕ್ಕೆ ನೀಡಿದ್ದಾರೆ. ಶರಣರು ತೋರಿದ ಮಾರ್ಗದಲ್ಲಿ ಪ್ರತಿಯೊಬ್ಬರೂ ನಡೆಯಬೇಕು ಎಂದರು. ಚನ್ನಯ್ಯ ತಾತ, ಗ್ರಾಪಂ ಸದಸ್ಯ ಭೀಮರೆಡ್ಡಿ ನಾಯಕ, ಉಮ್ಮಣ್ಣ ನಾಯಕ, ಬಸವರಾಜ, ಶಿವಪ್ಪ, ಬೂದಯ್ಯ, ಶರಣಬಸವ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net