ಕಿತ್ತೂರು ನಾಡಿನ ಧ್ವನಿ ಬಾಬಾಸಾಹೇಬ

22kittur1
Published on

ಚನ್ನಮನ ಕಿತ್ತೂರು: ಬಾಬಾಸಾಹೇಬ ಪಾಟೀಲ ಅವರನ್ನು ಎಲ್ಲರೂ ಪ್ರೀತಿಯಿಂದ ಧಣಿ ಎಂದು ಕರೆಯುತ್ತಾರೆ. ಅವರು ಧಣಿಯಷ್ಟೇ ಅಲ್ಲ, ಕಿತ್ತೂರು ನಾಡಿನ ಧ್ವನಿಯಾಗಿದ್ದಾರೆ ಎಂದು ಸ್ಥಳಿಯ ರಾಜಗುರು ಕಲ್ಮಠದ ಮಡಿವಾಳ ರಾಜ ಯೋಗೀಂದ್ರ ಸ್ವಾಮೀಜಿ ಅಭಿಮತ ವ್ಯಕ್ತಪಡಿಸಿದರು.

ತಾಲೂಕಿನ ನೇಗಿನಹಾಳ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶಾಸಕ ಬಾಬಾಸಾಹೇಬ ಪಾಟೀಲ ಹಾಗೂ ಸಹೋದರ ನಾನಾಸಾಹೇಬ ಪಾಟೀಲರ ಜನ್ಮದಿನದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಸರ್ಕಾರ ಬಂದ ಕೆಲ ವರ್ಷಗಳಲ್ಲೇ ದಾಖಲೆ ಅನುದಾನ ತರುವ ಮೂಲಕ ಕಿತ್ತೂರಿನ ಗತವೈಭವ ಸಾರುವ ಕೆಲಸ ಮಾಡುತ್ತಿದ್ದಾರೆ. ಥೀಮ್​ ಪಾರ್ಕ್​ ನಿರ್ಮಾಣಕ್ಕೆ 30 ಕೋಟಿ ರೂ.ಅನುದಾನಕ್ಕೆ ಅನುಮೋದನೆ ನೀಡಿದೆ. ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀೆಯಲ್ಲಿ ಕಿತ್ತೂರು ತಾಲೂಕು ಜಿಲ್ಲೆಗೆ ಪ್ರಥಮ ಸ್ಥಾನ ಪಡೆಯುವಲ್ಲಿ ಶಾಸಕರ ಕೊಡುಗೆ ಶ್ಲಾನೀಯ ಎಂದರು.

ನಿಚ್ಚಣಕಿಯ ಗುರು ಮಡಿವಾಳೇಶ್ವರ ಮಠದ ಪಂಚಾರಿ ಸ್ವಾಮೀಜಿ ಮಾತನಾಡಿ, ಕಿತ್ತೂರು ಅಭಿವೃದ್ಧಿ ಕನಸು ನನಸಾಗಿಸುವ ಮೂಲಕ ಶಾಸಕ ಬಾಬಾಸಾಹೇಬ ಪಾಟೀಲರು ಜನಪ್ರಿಯ ನಾಯಕರಾಗಿದ್ದಾರೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯ ನಡೆಯುವ ಮೂಲಕ ರಾಜಕೀಯ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು.

ವಿವಿಧ ಕಾರ್ಯಕ್ರಮ: ಶಾಸಕ ಬಾಬಾಸಾಹೇಬ ಪಾಟೀಲರ 53ನೇ ಹುಟ್ಟುಹಬ್ಬದ ಅಂಗವಾಗಿ ವಿವಿಧ ಕಾರ್ಯಕ್ರಮ ಜರುಗಿದವು. ರಾಷ್ಟ್ರೀಯ ಹೆದ್ದಾರಿ ಬಳಿಯ ರಾಣಿ ಚನ್ನಮ್ಮಾಜಿ, ಸಂಗೊಳ್ಳಿ ರಾಯಣ್ಣ ಹಾಗೂ ಅಮಟೂರು ಬಾಳಪ್ಪ ಅವರ ಪುತ್ಥಳಿಗೆ ಶಾಸಕರು ಪುಷ್ಪನಮನ ಸಲ್ಲಿಸಿದರು. ಪಟ್ಟಣದ ಬಸ್​ ನಿಲ್ದಾಣದ ಆವರಣದಲ್ಲಿ ಸಸಿ ನೆಟ್ಟರು.

ಪಪಂ ಅಧ್ಯ ಜೈಸಿದ್ದರಾಮ ಹಾಗೂ ಪಪಂ ಸದಸ್ಯರು, ಕಾರ್ಯಕರ್ತರು ಸರ್ಕಾರಿ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಿಸಿದರು. ನೇಗಿನಹಾಳ ಸೇರಿ ವಿವಿಧೆಡೆ ರಕ್ತದಾನ ಶಿಬಿರ ಜರುಗಿದವು.

ಮುಸ್ಲಿಂ ಧರ್ಮ ಗುರು ಹಜರತ್​ ತನ್ವೀರಸಾಬ್​, ಕೆಪಿಸಿಸಿ ಸದಸ್ಯೆ ರೋಹಿಣಿ ಬಾಬಾಸಾಹೇಬ ಪಾಟೀಲ, ರಾಜೇಶ್ವರಿ ನಾನಾಸಾಹೇಬ ಪಾಟೀಲ, ಸಂಗನಗೌಡ ಪಾಟೀಲ, ಮುದುಕಪ್ಪ ಮರಡಿ, ಅಭಿಮಾನಿಗಳು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net