ದೇವರ ದರ್ಶನ ಪಡೆದರೆ ಕಷ್ಟ ದೂರ

2
ಹಾಲಳ್ಳಿ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಶ್ರೀಶೈಲ ಮಲ್ಲಿಕಾರ್ಜುನನ ಐದೇಸಿ ಕಾರ್ಯಕ್ರಮ ಜರುಗಿತು. ಬಸಯ್ಯ ಹಿರೇಮಠ, ಗುರುದೇವ ಕೆಂಚಗೊಂಡ ಇತರರಿದ್ದರು.
Published on

ಅರಟಾಳ: ಪ್ರತಿವರ್ಷ ಭಕ್ತಿಯಿಂದ ಶ್ರೀಶೈಲಂ ಮಲ್ಲಿಕಾರ್ಜುನ ದರ್ಶನಕ್ಕೆ ಕಾಲ್ನಡಿಗೆ ಮೂಲಕ ಹೋಗಿ ದೇವರ ದರ್ಶನ ಪಡೆದರೆ ಅಂತವರ ಕಷ್ಟಗಳು ಪರಿಹಾರವಾಗುತ್ತವೆ ಎನ್ನುವ ನಂಬಿಕೆ ಭಕ್ತರಲ್ಲಿದೆ. ಯಾರು ಭಕ್ತಿಯಿಂದ ನಡೆದುಕೊಳ್ಳುತ್ತಾರೆ ಅಂತವರ ಬದುಕಿನಲ್ಲಿ ಕಷ್ಟಗಳು ಬರುವುದಿಲ್ಲ ಎಂದು ಬಸಯ್ಯ ಹಿರೇಮಠ ಸ್ವಾಮೀಜಿ ಹೇಳಿದರು.

ಸಮೀಪದ ಹಾಲಳ್ಳಿ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಶ್ರೀಶೈಲ ಮಲ್ಲಿಕಾರ್ಜುನನ ದೇವರ ಕಂಬಿ ಐದೇಶಿ ಕಾರ್ಯಕ್ರಮದಲ್ಲಿ ಮಂಗಳವಾರ ಪೂಜೆ ಸಲ್ಲಿಸಿ ಮಾತನಾಡಿ, ನಮ್ಮ ಬದುಕಿನ ಬಂಡಿ ಸಾಗಬೇಕಾದರೆ ಪರಮಾತ್ಮನ ಕೃಪೆ ಬೇಕು. ಆಗ ನಾವು ಬದುಕಿನ ದಡ ಸೇರುತ್ತೇವೆ ಎಂದರು.

ಎಲ್ಲರಿಗೂ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಗ್ರಾಪಂ ಮಾಜಿ ಅಧ್ಯಕ್ಷ ಗುರುದೇವ ಕೆಂಚಗೊಂಡ, ತಮ್ಮಯ್ಯ ಮಠಪತಿ, ಅಶೋಕ ಪಾಟೀಲ, ರಾಮಗೊಂಡ ಐಗಳಿ, ಗಿರಮಲ್ಲ ಕಲಶೆಟ್ಟಿ, ಬಸವರಾಜ ನೇಮಗೌಡ, ಸಮರ್ಥ ಮಠಪತಿ, ಮಲ್ಲಿಕಾರ್ಜುನ ಮಠಪತಿ ಹಾಗೂ ಭಕ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net