

ವಿಜಯವಾಣಿ ಸುದ್ದಿಜಾಲ ಧಾರವಾಡ
ಜೀವನದಲ್ಲಿ ನಾವೆಲ್ಲ ಸಾಮಾನ್ಯವಾಗಿ ಮನೆ, ಜಮೀನು, ಬಂಗಾರ, ಇತರ ವಸ್ತುಗಳನ್ನು ಸಂಪತ್ತು ಎಂದುಕೊಂಡಿದ್ದೇವೆ. ಆದರೆ ಶ್ರೀ ಕಷ್ಣ ಪರಮಾತ್ಮನ ದೃಷ್ಟಿಯಲ್ಲಿ ಸಜ್ಜನರ ಸದ್ಗುಣಗಳೇ ನಿಜವಾದ ಸಂಪತ್ತು ಎಂದು ವಿದ್ವಾಂಸ ಪಂ. ಸುಘೋಷಾಚಾರ್ಯ ಕೊರ್ಲಹಳ್ಳಿತಿಳಿಸಿದರು.
ಇಲ್ಲಿನ ಸತ್ತೂರಿನ ನಾರಾಯಣ ಪಾರಾಯಣ ಬಳಗದ ವತಿಯಿಂದ ಇತ್ತೀಚೆಗೆ ಏರ್ಪಡಿಸಿದ್ದ ಶ್ರೀಮದ್ ಭಗವದ್ಗೀತಾ ಅಭಿಯಾನದಲ್ಲಿ ಅವರು ಮಾತನಾಡಿದರು.
ಸಕಲ ಜೀವರಾಶಿಗಳಲ್ಲೂ 2 ತರಹದ ಗುಣಗಳಿರುತ್ತವೆ. ದೈವೀ ಸಂಪತ್ತು ಹೊಂದಿರುವ ಸಜ್ಜನರ ಸಾತ್ವಿಕ ಗುಣಗಳು, ಮತ್ತೊಂದು ಅಸುರಿ (ದೈತ್ಯ) ಸಂಪತ್ತು ಹೊಂದಿರುವ ರ್ದುಜನರ ತಾಮಸಿ ಗುಣಗಳು. ನಾವೆಲ್ಲರೂ ಸಾತ್ವಿಕ ಗುಣ ಅಳವಡಿಸಿಕೊಂಡು, ತಾಮಸಿ ಗುಣಗಳು ನಮ್ಮಲ್ಲಿ ಬರದಂತೆ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ಜೀವನದುದ್ದಕ್ಕೂ ದುಃಖಕ್ಕೆ ಕಾರಣೀಭೂತರಾಗುತ್ತೇವೆ. ಮನಸ್ಸು, ಮಾತು, ಶರೀರದಿಂದ ಯಾರಿಗೂ ಯಾವ ರೀತಿಯೂ ಕಷ್ಟ ಕೊಡದೆ, ಭಗವಂತನ ಕಾರ್ಯದಲ್ಲಿ ಶ್ರದ್ಧಾ ಭಕ್ತಿಯಿಂದ ಸಮರ್ಪಣಾ ಮನೋಭಾವವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಇದಕ್ಕೂ ಪೂರ್ವದಲ್ಲಿ ನಾರಾಯಣಿ ಭಜನಾ ಮಂಡಳಿಯಿಂದ ಭಜನೆ ನೆರವೇರಿತು. ರಘೋತ್ತಮ ಅವಧಾನಿ, ಕೃಷ್ಣ ಹುನಗುಂದ, ಹನುಮಂತ ಪುರಾಣಿಕ, ಡಾ. ಶ್ರೀನಾಥ, ಬದ್ರಿನಾಥ ಬೆಟಗೇರಿ, ಉದಯ ದೇಶಪಾಂಡೆ, ಪ್ರಕಾಶ ದೇಸಾಯಿ, ಪ್ರಮೋದ ಶಿರುಗುಪ್ಪಿ, ಸಂಜೀವ ಜೋಶಿ, ಅಶೋಕ ಬಹದ್ದೂರ ದೇಸಾಯಿ, ಕೇಶವ ಕುಲಕಣಿರ್, ಪ್ರಾಣೇಶ ಮಳಗಿ, ಆನಂದ ದೇಶಪಾಂಡೆ, ಧೀರೇಂದ್ರ ತಂಗೋಡ, ಎಸ್.ಎಂ. ಜೋಶಿ, ಸಿ.ಕೆ. ಕುಲಕಣಿರ್, ಎಲ್.ವಿ. ಜೋಶಿ, ಇತರರು ಇದ್ದರು.