ಮೆಣಸಿನಕಾಯಿ ಬೆಳೆ ನಾಶಪಡಿಸಿದ ದುಷ್ಟರು

The villains who destroyed the chilli crop
ನಾಲತವಾಡ ಸಮೀಪದ ಚವನಬಾವಿ ಗ್ರಾಮದ ರೈತ ಬಸವರಾಜ ಹಾದಿಮನಿ ಅವರ ಮೆಣಸಿನಕಾಯಿ ಬೆಳೆ ನಾಶಪಡಿಸಿರುವುದು.
Published on

ನಾಲತವಾಡ: ರೈತ ಕಷ್ಟಪಟ್ಟು ಬೆಳೆದಿದ್ದ ಮೆಣಸಿನಕಾಯಿ ಬೆಳೆಯನ್ನು ಕಿಡಿಗೇಡಿಗಳು ಮಂಗಳವಾರ ರಾತ್ರಿ ನಾಶಪಡಿಸಿದ್ದಾರೆ.

ಚವನಬಾವಿ ಗ್ರಾಮದ ಬಸವರಾಜ ಈಶಪ್ಪ ಹಾದಿಮನಿ ಅವರು 1.31 ಎಕರೆಯಲ್ಲಿ ಬೆಳೆದಿದ್ದ ಬ್ಯಾಡಗಿ ಮೆಣಸಿನಕಾಯಿ ಬೆಳೆ ಸಂಪೂರ್ಣ ಹಾಳಾಗಿದೆ.
ಎರಡು ತಿಂಗಳಿನಿಂದ ರೈತ ಬಸವರಾಜ ಬರದ ನಡುವೆಯೂ ಕಷ್ಟಪಟ್ಟು ನೀರು ಹಾಯಿಸಿ ಬೆಳೆ ಬೆಳೆಸಿದ್ದ. ಎಂದಿನಂತೆ ಮಂಗಳವಾರ ರಾತ್ರಿ 10ರ ನಂತರ ತ್ರೀ ಫೇಸ್ ವಿದ್ಯುತ್ ಪೂರೈಕೆ ಸಮಯದಲ್ಲಿ ಬೆಳೆಗೆ ನೀರು ಹಾಯಿಸಲು ರೈತ ಹೋದಾಗ ಅಪರಿಚಿತರಿಬ್ಬರು ಕುಡುಗೋಲಿನಿಂದ ಮೆಣಸಿನಕಾಯಿ ಬೆಳೆಯನ್ನು ಕೊಯ್ದು ಹಾಳು ಮಾಡುತ್ತಿದ್ದರು. ಇದನ್ನು ಗಮನಿಸಿ ರೈತ ಕೂಗಾಡಲು ಆರಂಭಿಸಿದಾಗ ಅವರಿಬ್ಬರು ಬೈಕ್ ಮೇಲೆ ಅಲ್ಲಿಂದ ಪರಾರಿಯಾಗಿದ್ದಾರೆ.

ಪರಾರಿಯಾದವರು ಮುದ್ದೇಬಿಹಾಳ ತಾಲೂಕು ಸರೂರು ಗ್ರಾಮದವರು ಎಂದು ರೈತ ಗುರುತಿಸಿದ್ದಾನೆ. ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net