

ಬೇಲೂರು: ಚನ್ನಾಪುರ ಗ್ರಾಮದ ಸರ್ಕಾರಿ ಜಾಗದಲ್ಲಿ ಸೆಸ್ಕ್‌ನಿಂದ ವಿದ್ಯುತ್ ವಿತರಣಾ ಘಟಕದ ಕಾಮಗಾರಿಗೆ ಶಾಸಕ ಕೆ.ಎಸ್.ಲಿಂಗೇಶ್ ಹಾಗೂ ಅಧಿಕಾರಿಗಳು ಭೂಮಿಪೂಜೆ ನೆರವೇರಿಸುವ ಸಂದರ್ಭದಲ್ಲಿ ಗ್ರಾಮಸ್ಥರು ಗದ್ದಲ ಎಬ್ಬಿಸಿ ಶಾಸಕರೊಂದಿಗೆ ಮಾತಿನ ಚಕಮಕಿ ನಡೆಸಿದರು. ಶಾಸಕ ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಸ್ಥಳದಲ್ಲೇ ಪ್ರತಿಭಟನೆ ನಡೆಸಿದರು.
ನಮ್ಮ ಗ್ರಾಮದಲ್ಲಿ 50ಕ್ಕೂ ಹೆಚ್ಚು ಕುಟುಂಬಗಳು ವಾಸವಿದ್ದು, ಜಾನುವಾರುಗಳಿಗೆ ಮೇಯುವುದಕ್ಕಾಗಿ ಗೋಮಾಳದ ಜಮೀನನ್ನು ಹಾಗೆಯೇ ಬಿಟ್ಟಿದ್ದೆವು. ಆದರೆ ಕಾಮಗಾರಿ ಉದ್ದೇಶದಿಂದ ಪೂಜೆ ನಡೆಸುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ಹೊರ ಹಾಕಿದರು.
ಸ್ಥಳಕ್ಕೆ ಆಗಮಿಸಿದ ಪೊಲೀಸರು ತಿಳಿ ಹೇಳಿ ಗ್ರಾಮಸ್ಥರನ್ನು ಕಳಹಿಸಿದರು. ತಹಸೀಲ್ದಾರ್ ನಟೇಶ್, ತಾಪಂ ಸದಸ್ಯ ಮಂಜುನಾಥ್, ಇಒ ರವಿಕುಮಾರ್, ಸೆಸ್ಕ್‌ನ ಲೋಕೇಶ್ ಇತರರಿದ್ದರು.