ಮಳೆಗಾಗಿ ದೇವರ ಮೊರೆಹೋದ ಗ್ರಾಮಸ್ಥರು

25ss1homa puuje
Published on

ಮಡಿಕೇರಿ:ಬಿಸಿಲಿನ ಬೇಗೆಯಿಂದ ಬೆಂದಿರುವ ಜನರು ಮಳೆಗಾಗಿ ದೇವರ ಮೊರೆ ಹೋಗಿದ್ದಾರೆ. ಕೊಡ್ಲಿಪೇಟೆ ಹೋಬಳಿಯ ಬೆಸೂರು ಗ್ರಾ.ಪಂ.ಗೆ ಸೇರಿದ ಶನಿವಾರ ಸಂತೆಯ ಆಗಳಿ ಗ್ರಾಮದ ಗವಿ ಬೆಟ್ಟದ ಗುಹೆಯೊಳಗಿರುವ ಉದ್ಭವ ಗವಿಸಿದ್ದೇಶರ‌್ವ ಸ್ವಾಮಿ ದೇಗುಲದಲ್ಲಿ ಆಗಳಿ ಗ್ರಾಮಸ್ಥರು ಮತ್ತು ದೇವಸ್ಥಾನ ಸಮಿತಿಯಿಂದ ಗುರುವಾರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ದೇವಸ್ಥಾನದಲ್ಲಿ ಶ್ರೀ ಗವಿಸಿದ್ದೇಶ್ವರ ಸ್ವಾಮಿಗೆ ಮಳೆಗಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು. ಮಳೆಗಾಗಿ ವಿಶೇಷ ಪೂಜೆಯ ಜತೆಯಲ್ಲಿ ವಿಶೇಷ ಹೋಮ ನೆರವೇರಿಸಲಾಯಿತು. ಅರ್ಚಕ ಮೃತುಂಜಯ ಹಿರೇಮಠ್, ಮಣಿಕಂಠ, ನೇತೃತ್ವದಲ್ಲಿ ಅರ್ಚಕರ ತಂಡ ಪೂಜಾ ಕೈಂಕರ್ಯ ನೆರವೇರಿಸಿದರು. ಗ್ರಾಮಸ್ಥರೆಲ್ಲರೂ ಪೂಜಾ ಕಾರ್ಯದಲ್ಲಿ ಪಾಲ್ಗೊಂಡು ಮಳೆಯ ಆಗಮನಕ್ಕಾಗಿ ಸಾಮೂಹಿಕವಾಗಿ ಪ್ರಾರ್ಥಿಸಿದರು. ಈ ವೇಳೆ ದೇವಸ್ಥಾನ ಸಮಿತಿ ಅಧ್ಯಕ್ಷ ಪ್ರಸನ್ನ, ಗ್ರಾಮದ ಪ್ರಮುಖ ಸುಬ್ಬಯ್ಯ, ದೇವಸ್ಥಾನ ಸಮಿತಿ ಪದಾಧಿಕಾರಿಗಳು, ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net