ಒಕ್ಕೂಟದ ಗೆಲುವು ಸೇವೆಗೆ ದೊರೆತ ಮಾನ್ಯತೆ

okkuta
Published on

ವಿಜಯವಾಣಿ ಸುದ್ದಿಜಾಲ ಬೆಳ್ವೆ

ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘದ ಪ್ರಗತಿ ಏರುಗತಿಯಲ್ಲಿ ಸಾಗುತ್ತಿದೆ. ವಿಶ್ವಾಸವಿಟ್ಟು ಈ ಬಾರಿ ಚುನಾವಣೆಯಲ್ಲಿ ಬೆಳ್ವೆ ರೈತ ಬಂಧು ಸಹಕಾರ ಒಕ್ಕೂಟ ತಂಡ ಗೆಲ್ಲಿಸಿರುವುದು ನಮ್ಮ ಸೇವೆಗೆ ಸಿಕ್ಕ ಮಾನ್ಯತೆ ಎಂದು ಸಂಘದ ನೂತನ ಅಧ್ಯಕ್ಷ ಎಸ್.ಜಯರಾಮ ಶೆಟ್ಟಿ ಸುರ‌್ಗೋಳಿ ಹೇಳಿದರು.

ಸಂಘದ ಕಚೇರಿಯಲ್ಲಿ ಶುಕ್ರವಾರ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದಲ್ಲಿ ಅಧ್ಯಕ್ಷರಾಗಿ ಆಯ್ಕೆಗೊಂಡು ಮಾತನಾಡಿ, ಸಂಘವು 4 ಕೋಟಿ ರೂ. ಷೇರು ಬಂಡವಾಳ ಹೊಂದಿದ್ದು, ಠೇವಣಿ 84 ಕೋಟಿ ರೂ. ಇದೆ. ಪ್ರತಿ ವರ್ಷ 2 ಕೋಟಿ ರೂ. ಲಾಭ ಪಡೆಯುತ್ತಿದ್ದು, ಸದಸ್ಯರ ಸಾಲ 114 ಕೋಟಿ ರೂ.ಗೂ ಹೆಚ್ಚಿದೆ. ಶೂನ್ಯ ಬಡ್ಡಿ ದರದಲ್ಲಿ 41 ಕೋಟಿ ರೂ. ಸಾಲ ವಿತರಿಸುವ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದೆ ಎಂದರು.

ಉಪಾಧ್ಯಕ್ಷರಾಗಿ ಆಯ್ಕೆಯಾದ ಬಿ.ಹರೀಶ್ ಕಿಣಿ ಬೆಳ್ವೆ, ನಿರ್ದೇಶಕರಾದ ಇಚ್ಚಿತಾರ್ಥ ಶೆಟ್ಟಿ, ಚಂದ್ರಶೇಖರ ಶೆಟ್ಟಿ ಎಂ, ದಯಾನಂದ ಆರ್ ಶೆಟ್ಟಿ, ಎಚ್.ಸೀತಾರಾಮ ಶೆಟ್ಟಿ, ದಯಾನಂದ ಪೂಜಾರಿ ಕೆ, ಸವಿತಾ ಶೆಟ್ಟಿ, ಸುಜಾತ ಪೂಜಾರಿ, ಕೃಷ್ಣ ನಾಯ್ಕ, ಉದಯ ಶೆಟ್ಟಿ ಶೇಡಿಮನೆ, ಶಿವರಾಮ, ಪ್ರದೀಪ್ ನಾಯ್ಕ ಉಪಸ್ಥಿತರಿದ್ದರು. ಕುಂದಾಪುರ ಸಹಕಾರ ನಿಬಂಧಕರ ಕಚೇರಿ ಸಹಕಾರ ಅಭಿವೃದ್ಧಿ ಅಧಿಕಾರಿ ಎಂ.ಸಿ ಸ್ವಾಮಿ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ಸಂಘದ ಸಿಇಒ ಕೀರ್ತಿಕುಮಾರ್ ಹಾಗೂ ಸಿಬ್ಬಂದಿ ಸಹಕರಿಸಿದರು.

ಸಂಘದಲ್ಲಿ 20ವರ್ಷಗಳಿಂದ ಅಧ್ಯಕ್ಷನಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದೆನೆ. ಸಂಘದ ವ್ಯಾಪ್ತಿಯಲ್ಲಿ ಸದಸ್ಯ ರೈತರು ಕೃಷಿಯನ್ನು ಅವಲಂಬಿಸಿರುವುದರಿಂದ ರೈತರ ಬೇಡಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತಿದೆ. ಬೆಳ್ವೆ ಪ್ರಧಾನ ಕಚೇರಿ ಮತ್ತು ಹಾಲಾಡಿ ಶಾಖೆಯನ್ನು ಮೇಲ್ದರ್ಜೆಗೆ ಏರಿಸುವುದು, ಶುದ್ಧ ತೆಂಗಿನೆಣ್ಣೆ ಘಟಕ ಆರಂಭಿಸುವುದು, ರೈತರಿಗೆ ಅನುಕೂಲವಾಗುವ ಗೋದಾಮುಗಳ ನಿರ್ಮಾಣ, ಕೃಷಿ ಪರಿಕರಗಳ ಮಾರಾಟ ಕೇಂದ್ರ ಸ್ಥಾಪಿಸುವುದು ಹಾಗೂ ಇನ್ನಿತರ ಸೌಲಭ್ಯಗಳಿಗೆ ಆದ್ಯತೆ ನೀಡಲಾಗುವುದು. -ಎಸ್.ಜಯರಾಮ ಶೆಟ್ಟಿ ಸುರ‌್ಗೋಳಿ ನೂತನ ಅಧ್ಯಕ್ಷ https://www.vijayavani.net/varshavadhi-abhari-seve-in-byndoor https://www.vijayavani.net/basrur-independence-day-preparatory-meeting

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net