ಕೆರೆಗೆ ವ್ಯಾನ್ ಮಗುಚಿ ಹಲವರಿಗೆ ಗಾಯ

17spt6
Published on

ಮಡಿಕೇರಿ: ಕಾಫಿ ಕೊಯ್ಲು ಮಾಡುವ ಮಹಿಳಾ ಕಾರ್ಮಿಕರನ್ನು ಬುಧವಾರ ಕರೆದೊಯ್ಯುತ್ತಿದ್ದ ಒಮ್ನಿ ವ್ಯಾನ್ ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಮಗುಚಿದ್ದು, ಕಾರ್ಮಿಕರು ಪವಾಡಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.


ಸೋಮವಾರ ಪೇಟೆಯ ಮದಲಾಪುರದ ಜ್ಯೋತಿ, ಲಕ್ಷ್ಮೀ, ಮನು, ಸೀತಮ್ಮ, ರತಿ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಹಾನಗಲ್ಲು ಗ್ರಾಮದ ಶಿವಣ್ಣ ಅವರು ತಮ್ಮ ಕಾಫಿ ತೋಟದಲ್ಲಿ ಕಾಫಿ ಕೊಯ್ಲು ಮಾಡಿಸಿ, ಸಂಜೆ ಯಡೂರು ಮಾರ್ಗವಾಗಿ ಬರುವಾಗ ಗ್ರಾಮದ ದೇವರಕೆರೆಗೆ ಚಾಲಕನ ನಿಯಂತ್ರಣ ತಪ್ಪಿ ವ್ಯಾನ್ ಮಗುಚಿದೆ.

ರಾಜ್ಯ ಹೆದ್ದಾರಿಯಲ್ಲಿ ಕೆರೆ ಇದ್ದು, ಕೆರೆ ತಟದಲ್ಲಿ ರೇಲಿಂಗ್ಸ್ ಅಳವಡಿಸದ ಹಿನ್ನೆಲೆಯಲ್ಲಿ ಅನಾಹುತಕ್ಕೆ ದಾರಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net