

ಹೆಬ್ರಿ: ಹಣದ ಶ್ರೀಮಂತಿಕೆಗಿಂತ ನೆಮ್ಮದಿಯ ಶ್ರೀಮಂತಿಕೆ ದೊಡ್ಡದು ಎಂಬ ಜೀವನದ ಮೌಲ್ಯವನ್ನು ಹಿರಿಯರು ನಮಗೆ ಬಳುವಳಿಯಾಗಿ ನೀಡಿದ್ದಾರೆ ಎಂಬುದನ್ನು ಮರೆಯಬಾರದು ಎಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.
ಹಿರಿಯಡಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮ ಉದ್ಘಾಟಿಸಿದ ಕಾಲೇಜು ಶಿಕ್ಷಣ ಇಲಾಖೆ ಮಂಗಳೂರು ವಿಭಾಗದ ಜಂಟಿ ನಿರ್ದೇಶಕಿ ಡಾ.ಕವಿತಾ ಕೆ.ಆರ್. ಮಾತನಾಡಿ, ಕೌಶಲ ಮತ್ತು ಮಾನವೀಯ ಸಂಬಂಧ ಕಾಪಾಡುವ ಗ್ರಾಮೀಣ ವಿದ್ಯಾರ್ಥಿಯೂ ಅದ್ವಿತೀಯ ಸಾಧನೆ ಮಾಡಬಲ್ಲ ಎಂದರು.
ನಿವೃತ್ತ ಪ್ರಾಂಶುಪಾಲ ದೋಮ ಚಂದ್ರಶೇಖರ ಶುಭಹಾರೈಸಿದರು. ಪ್ರಾಂಶುಪಾಲ ಡಾ.ಜಯಪ್ರಕಾಶ್ ಶೆಟ್ಟಿ ಎಚ್., ಡಾ. ಎನ್.ಎಸ್. ಶೆಟ್ಟಿ, ದಯಾನಂದ ಮಲ್ಯ, ಸುಂದರ ಕಾಂಚನ್ ಉಪಸ್ಥಿತರಿದ್ದರು. ಡಾ.ಸೌಮ್ಯಲತಾ ಕಾಲೇಜಿನ ವಾರ್ಷಿಕ ವರದಿ ವಾಚಿಸಿದರು. ಡಾ.ಲಿತಿನ್ ಬಿ.ಎಂ. ಸ್ವಾಗತಿಸಿದರು. ಅಪರ್ಣಾ ಕೆ.ಯು. ವಂದಿಸಿದರು. ರವಿಚಂದ್ರ ಬಾಯಿರಿ ಕೆ. ಕಾರ್ಯಕ್ರಮ ನಿರೂಪಿಸಿದರು.