ನ್ಯಾನೋ ಯೂರಿಯಾ ಬಳಕೆ ಅನಿವಾರ್ಯ

The use of nano urea is essential.
ಗುಳೇದಗುಡ್ಡ ಸಮೀಪದ ಜಮೀನಿನಲ್ಲಿ ಇಫ್ಕೋ ಕಂಪನಿ ವತಿಯಿಂದ ಡ್ರೋನ್ ಮೂಲಕ ನ್ಯಾನೋ ಯೂರಿಯಾ ಸಿಂಪಡಣೆ ಪ್ರಾತ್ಯಕ್ಷಿಕೆ ನಡೆಯಿತು.
Published on

ಗುಳೇದಗುಡ್ಡ: ಬೆಳೆಗಳಿಗೆ ಹೆಚ್ಚಿನ ಯೂರಿಯಾ ಹಾಕಿ ಜಮೀನು ಸವಳಾಗಿ ಫಲವತ್ತತೆ ಕಡಿಮೆಯಾಗಿದೆ. ಯೂರಿಯಾ ನೀರಿಗೆ ಸೇರಿ ಜಲ ಕಲುಷಿತವಾಗುತ್ತಿದೆ. ಯೂರಿಯಾದ ಅಧಿಕ ಬಳಕೆಯಿಂದ ಇಂತಹ ಪರಿಣಾಮಗಳು ಆಗುತ್ತಿವೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಯೂರಿಯಾ ಬದಲಿಗೆ ನ್ಯಾನೋ ಯೂರಿಯಾ ಬಳಸಬೇಕಾಗಿದೆ ಎಂದು ಉಪ ಕಷಿ ನಿರ್ದೇಶಕ ಎಲ್.ಐ. ರೂಢಗಿ ಹೇಳಿದರು.

ಇಫ್ಕೋ ಕಂಪನಿ ವತಿಯಿಂದ ಪಟ್ಟಣದ ಬಾಗಲಕೋಟೆ ರಸ್ತೆಯ ಭಾರತ್ ಪೆಟ್ರೋಲ್ ಹತ್ತಿರದ ಹಾಲನ್ನವರ ಜಮೀನಿನಲ್ಲಿ ಶುಕ್ರವಾರ ಡ್ರೋನ್ ಮೂಲಕ ನ್ಯಾನೋ ಯೂರಿಯಾ ಸಿಂಪಡಣೆ ಪ್ರಾತ್ಯಕ್ಷಿಕೆ ನೀಡಿ ಮಾತನಾಡಿ, ಬೆಳೆಗಳಿಗೆ ಡ್ರೋನ್ ಬಳಸಿ ನ್ಯಾನೋ ಯೂರಿಯಾ ಸಿಂಪಡಿಸುವುದರಿಂದ ರೈತರಿಗೆ ಮುಖ್ಯವಾಗಿ ಕಾಡುವ ಆಳುಗಳ ಸಮಸ್ಯೆಗೆ ಪರಿಹಾರ ದೊರೆಯುತ್ತದೆ. ಸಮಯದ ಉಳಿತಾಯವೂ ಆಗುತ್ತದೆ ಎಂದರು.

ಮಣ್ಣಿನಲ್ಲಿ ಸಾವಯವ ಇಂಗಾಲದ ಪ್ರಮಾಣ ಅತಿ ಕಡಿಮೆ ಇದೆ. ಅತಿಯಾದ ಯೂರಿಯಾ ಬಳಕೆಯಿಂದ ಇಂಗಾಲ ಪ್ರಮಾಣ ಕ್ಷೀಣಿಸುತ್ತಿದೆ. ರೈತರು ಬೆಳೆಗಳ ರವದಿ, ಕಳೆಗಳನ್ನು ಡಿಕಾಂಪೋಸ್ಟ್ ಮಾಡಿ ಸಾವಯವ ಗೊಬ್ಬರವನ್ನಾಗಿ ಬಳಸುವುದರಿಂದ ಭೂಮಿಯ ಸಾವಯವ ಇಂಗಾಲದ ಪ್ರಮಾಣ ಹೆಚ್ಚಾಗುತ್ತದೆ ಎಂದರು.

ಸಹಾಯಕ ಕೃಷಿ ನಿರ್ದೇಶಕರಾದ ಅಶೋಕ ತಿರಕನ್ನವರ, ಎಸ್.ಬಿ. ಹಳ್ಳೊಳ್ಳಿ, ಬಸವರಾಜ ಮಾಳೇದ, ಕಷಿ ಅಧಿಕಾರಿ ಆನಂದ ಗೌಡರ, ರೈತರಾದ ಯಲ್ಲಪ್ಪ ಬಸರಕೋಡ, ಯಮನಪ್ಪ ಹಿರೇಗೌಡ್ರ, ಸಿದ್ದಪ್ಪ ಗೌಡರ, ಕಮಲಪ್ಪ ಹುನ್ನೂರ, ಲಕ್ಷ್ಮಣ ಹಾಲನ್ನವರ, ಮಲ್ಲನಗೌಡ ಗೌಡರ, ತಿಪ್ಪಣ್ಣ ಗೌಡರ, ಮಹಾಂತೇಶ ಬೀಳಗಿ, ಮೂಕಪ್ಪ ಹುನ್ನೂರ, ರಾಮಣ್ಣ ವಡ್ಡರ, ಅಮರೀಶ ಚಿಲ್ಲಾಪೂರ, ಸೋಮು ಹೆಬ್ಬಳ್ಳಿ, ಎಟಿಎಂ ಬಸವರಾಜ ಧನ್ನೂರ, ಬಸವರಾಜ ಹಾಲನ್ನವರ, ಯಲಗೂರ್ದಪ್ಪ ವಾಳದ, ಯಲಗೂರ್ದಪ್ಪ ಗೌಡರ, ಮೈಲಾರಪ್ಪ ಗೌಡರ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net