ಆತ್ಮನನ್ನು ಪರಮಾತ್ಮನೊಂದಿಗೆ ಜೋಡಿಸುವ ಉಪನಿಷತ್

15kmt2_Upanishat
Published on

ಕುಮಟಾ: ಉಪನಿಷತ್ ಜ್ಞಾನವು ಅರಿಷಡ್​ವರ್ಗಗಳನ್ನು ಸಡಿಲಗೊಳಿಸಿ, ಅಹಂಕಾರ ನಾಶಪಡಿಸಿ, ಆತ್ಮನನ್ನು ಪರಮಾತ್ಮನೊಂದಿಗೆ ಜೋಡಿಸುತ್ತದೆ ಎಂದು ವೇದಮೂರ್ತಿ ಮಂಜುನಾಥ ಭಟ್ಟ ಕೊಡ್ಲಕೆರೆ ಹೇಳಿದರು.

ಇಲ್ಲಿನ ಹವ್ಯಕ ಸಭಾಭವನದಲ್ಲಿ ಶಂಕರ ಜಯಂತಿ ನಿಮಿತ್ತ ಹವ್ಯಕ ವಿದ್ಯಾವರ್ಧಕ ಸಂಘದ ಯಾಜ್ಞವಲ್ಕ್ಯ ಸಾಂಸ್ಕೃತಿಕ ವೇದಿಕೆಯ ವತಿಯಿಂದ ಆಯೋಜಿಸಿದ್ದ ಶ್ರೀ ಶಂಕರರ ತೈತ್ತಿರೀಯ ಉಪನಿಷತ್ ಭಾಷ್ಯ ಕುರಿತು ಧಾರ್ವಿುಕ ಪ್ರವಚನ ನೀಡಿದರು.

ಮಾನವ ಬದುಕಿನ ಇಹ-ಪರಗಳಿಗೆ ಬೇಡವಾದದ್ದನ್ನು ಸಡಿಲಿಸುವುದು ಮತ್ತು ಅದನ್ನು ನಾಶಪಡಿಸುವುದು ಹಾಗೂ ಒಳ್ಳೆಯದನ್ನು ಮರುಜೋಡಿಸುವುದೇ ಉಪನಿಷತ್​ಗಳ ಗುರಿ ಎಂದು ಅರ್ಥೈಸಬಹುದಾಗಿದೆ ಎಂದರು.

ಸಂಘದ ಅಧ್ಯಕ್ಷ ಚಂದ್ರಶೇಖರ ಉಪಾಧ್ಯಾಯ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳಲ್ಲಿ, ಹಿಂದು ಧರ್ಮದ ಪುನರುತ್ಥಾನ ಮಾಡಿ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಮಠವನ್ನು ಸ್ಥಾಪಿಸಿ ನಿರಂತರ ಧರ್ಮ ಪ್ರಚಾರವಾಗುವಂತೆ ಆಚಾರ್ಯ ಶಂಕರರು ಮಾಡಿದರು. ಶ್ರೀಶಂಕರರು ಅವತರಿಸದಿದ್ದರೆ ಬಹುಶಃ ನಾವೆಲ್ಲ ಹಿಂದುಗಳಾಗಿ ಉಳಿದಿರುತ್ತಿರಲಿಲ್ಲ ಎಂದರು.

ಶಾರದಾ ಹೆಗಡೆ ಹಾಗೂ ಸೀತಾ ಉಪಾಧ್ಯಾಯ ಶಂಕರಸ್ತೋತ್ರ ಪ್ರಸ್ತುತಪಡಿಸಿದರು. ಆಡಳಿತ ಮಂಡಳಿ ಸದಸ್ಯ ಆರ್.ವಿ. ಹೆಗಡೆ ವಂದನಾರ್ಪಣೆ ಮಾಡಿದರು. ಉಪಾಧ್ಯಕ್ಷ ಎಂ.ಎನ್. ಹೆಗಡೆ ನಿರೂಪಿಸಿದರು. ಸಾವಿತ್ರಿ ಭಟ್ಟ, ವಿಘ್ನೕಶ್ವರ ಭಟ್ಟ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net