ಮಂಗಳೂರು ಮ್ಯಾರಥಾನ್ ಟಿ-ಶರ್ಟ್, ಪದಕ ಅನಾವರಣ

mng--24 Oct Mangalore Marathon
Published on

ಮಂಗಳೂರು: ನೀವಿಯಸ್ ಮಂಗಳೂರು, ಮಂಗಳೂರು ರನ್ನರ್ಸ್ ಕ್ಲಬ್ ಸಹಯೋಗದಲ್ಲಿ ನ.10ರಂದು ನಗರದಲ್ಲಿ ಹಮ್ಮಿಕೊಂಡಿರುವ ನೀವಿಯಸ್ ಮಂಗಳೂರು ಮ್ಯಾರಥಾನ್‌ನ ಟಿ-ಶರ್ಟ್ ಹಾಗೂ ಪದಕವನ್ನು ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ಗುರುವಾರ ತಮ್ಮ ಕಚೇರಿಯಲ್ಲಿ ಅನಾವರಣಗೊಳಿಸಿದರು.

ಮಂಗಳೂರು ಮ್ಯಾರಥಾನ್ ನ.10ರಂದು ಬೆಳಗ್ಗೆ ಮಂಗಳಾ ಕ್ರೀಡಾಂಗಣದ ಬಳಿಯಿಂದ ತಣ್ಣೀರುಬಾವಿ ತನಕ ನಡೆಯಲಿದೆ. ಸುಮಾರು 5 ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಮ್ಯಾರಥಾನ್‌ನ ನಿರ್ದೇಶಕ ಅಭಿಲಾಷ್ ಡೊಮಿನಿಕ್ ತಿಳಿಸಿದರು.

ಟಿ-ಶರ್ಟ್‌ನಲ್ಲಿ ಕರಾವಳಿ ದೃಶ್ಯಾವಳಿಗಳನ್ನು ಪ್ರತಿಬಿಂಬಿಸುವ ಕಂದು, ಹಸಿರು ಮತ್ತು ನೀಲಿ ಬಣ್ಣಗಳನ್ನು ಒಳಗೊಂಡಂತೆ ಥೀಮ್ ಮತ್ತು ಬಣ್ಣದ ಪ್ಯಾಲೆಟ್‌ನಿಂದ ಪ್ರೇರಿತವಾದ ಅಂಶಗಳನ್ನು ಒಳಗೊಂಡಿದೆ. ಪದಕದಲ್ಲಿ ತುಳುನಾಡಿನ ಕ್ರೀಡೆ ಕಂಬಳದ ಚಿತ್ರವನ್ನು ಜೋಡಿಸಲಾಗಿದೆ.

ಮಂಗಳೂರು ರನ್ನರ್ಸ್ ಕ್ಲಬ್‌ನ ಅಧ್ಯಕ್ಷ ಅಮಿತಾ ಡಿಸೋಜ, ಕಾರ್ಯದರ್ಶಿ ಅಮರ್ ಕಾಂತ್, ನೀವಿಯಸ್ ಸಂಸ್ಥೆಯ ಅಭಿಷೇಕ್ ಹೆಗ್ಡೆ, ಕೆ.ಎಸ್.ರಾವ್ ಸ್ಥೆಯಲ್ಲಿರುವ ಎಸ್.ಎಲ್.ಶೇಟ್ ಜ್ಯುವೆಲ್ಲರ್ಸ್‌ನ ಪಾಲುದಾರ ಪ್ರಶಾಂತ್ ಶೇಟ್, ಹಾಂಗ್ಯೋ ಐಸ್‌ಕ್ರೀಂನ ಬಿಸಿನೆಸ್ ಡೆವಲಪ್‌ಮೆಂಟ್ ಮ್ಯಾನೇಜರ್ ರಾಕೇಶ್ ಕಾಮತ್, ಆನಂದ ಪ್ರಭು, ಶರಣ್ ಶೆಟ್ಟಿ ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net