ಅಪ್ರತಿಮ ನಾಯಕ ಡಾ.ಶ್ಯಾಮಾಪ್ರಸಾದ್

23BTG1
Published on

ಬೆಟಗೇರಿ: ಡಾ.ಶ್ಯಾಮಾಪ್ರಸಾದ್ ಮುಖರ್ಜಿ ದೇಶ ಕಂಡ ಅಪ್ರತಿಮ ನಾಯಕರು. ಕಾಶ್ಮೀರ ಭಾರತದಲ್ಲಿ ವಿಲೀನ ಆಗಬೇಕೆಂಬ ಹಕ್ಕೊತ್ತಾಯ ಮಂಡಿಸಿದ ಮೊದಲಿಗರಾಗಿದ್ದಾರೆ ಎಂದು ತಾಪಂ ಮಾಜಿ ಸದಸ್ಯ ಬಸವಂತ ಕೋಣಿ ಹೇಳಿದರು.

ಗ್ರಾಮದ ಡಾ.ಬೆಟಗೇರಿ ಕೃಷ್ಣಶರ್ಮ ವೃತ್ತದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಡಾ.ಶ್ಯಾಮಾಪ್ರಸಾದ್ ಮುಖರ್ಜಿ ಅವರ ಸ್ಮತಿ ದಿನ ಆಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಖರ್ಜಿ ಹಿಂದು ರಾಷ್ಟ್ರವಾದದ ಪ್ರಬಲ ಪ್ರತಿಪಾದಕರಾಗಿದ್ದರು. ಜನಸಂಘದ ಸಂಸ್ಥಾಪಕರಲ್ಲಿ ಪ್ರಮುಖರಾಗಿದ್ದರು ಎಂದರು.

ಸಂಗಯ್ಯ ಹಿರೇಮಠ ಡಾ.ಶ್ಯಾಮಾಪ್ರಸಾದ್ ಮುಖರ್ಜಿ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಮರ್ಪಿಸಿದರು. ಯುವ ಮುಖಂಡರಾದ ಈಶ್ವರ ಬಳಿಗಾರ, ಸುಭಾಷ ಕರೆಣ್ಣವರ, ಸದಾಶಿವ ಕುರಿ, ಲಕ್ಷ್ಮಣ ಸೋಮಗೌಡ್ರ, ಪ್ರಕಾಶ ಗುಡದಾರ, ರಾಮಣ್ಣ ನೀಲಣ್ಣವರ, ಪುಂಡಲೀಕ ಹಾಲಣ್ಣವರ, ಸತ್ತೆಪ್ಪ ಹೊರಟ್ಟಿ, ಭೀಮನಾಯ್ಕ ನಾಯ್ಕರ, ಬಸನಪ್ಪ ದೇಯಣ್ಣವರ, ಗೌಡಪ್ಪ ಮೇಳೆಣ್ಣವರ, ನಿಂಗಪ್ಪ ಕಂಬಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net