ಸ್ವಾಸ್ಥ್ಯಸಮಾಜ ನಿರ್ಮಾಣದಲ್ಲಿ ಯುವಶಕ್ತಿ ಪಾತ್ರ ಅನನ್ಯ

The unique role of youth in building a healthy society
ಗೊಳಸಂಗಿಯಲ್ಲಿ ವಿದ್ಯಾರ್ಥಿಗಳಿಂದ ಪರಿಸರ ಶುಚಿತ್ವದ ಕುರಿತು ಪ್ರಭಾತೇರಿ ನಡೆಸಲಾಯಿತು. ಡಾ. ಅನುರಾಧಾ ಜೋಶಿ, ಎಸ್.ಎಸ್. ಮಾಳಜಿ, ಸುರೇಶ ಪಟ್ಟಣಶೆಟ್ಟಿ, ವಿ.ಪಿ. ಕಟ್ಟಿ ಇತರರಿದ್ದರು.
Published on

ಗೊಳಸಂಗಿ: ಸ್ವಾಸ್ಥ್ಯ ಸಮಾಜ ನಿರ್ಮಾಣದಲ್ಲಿ ಯುವಕರ ಪಾತ್ರ ಅನನ್ಯವಾಗಿದ್ದು, ದುಶ್ಚಟಗಳಿಂದ ದೂರವಿದ್ದು ಆರೋಗ್ಯದ ಕಡೆಗೆ ಗಮನ ಕೊಡಬೇಕು ಎಂದು ವಿಜಯಪುರ ್ಯಾಮಿಲಿ ಪ್ಲ್ಯಾನಿಂಗ್ ಅಸೋಸಿಯೇಷನ್ ಆ್ ಇಂಡಿಯಾ ವೈದ್ಯಾಧಿಕಾರಿ ಡಾ. ಅನುರಾಧಾ ಜೋಶಿ ಹೇಳಿದರು.

ಬಿ.ಎಸ್. ಪವಾರ ಪದವಿ ಪೂರ್ವ ಕಾಲೇಜು ಮಾದರಿ ಬಡಾವಣೆಯ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಉಪನ್ಯಾಸಕ ಎಸ್.ಎಸ್. ಮಾಳಜಿ ಮಾತನಾಡಿ, ಎನ್‌ಎಸ್‌ಎಸ್, ಸ್ಕೌಟ್ ಮತ್ತು ಗೈಡ್ಸ್, ಎನ್‌ಸಿಸಿ, ಭಾರತ ಸೇವಾದಳದ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಭಾಗಿಯಾಗಿ ದೇಶದ ಸುಭದ್ರತೆಗೆ ಕೈಜೋಡಿಸಬೇಕು. ಜತೆಗೆ ಮನೆಗೊಂದು ಮರ ನೆಡುವ ಮೂಲಕ ಪರಿಸರ ಸಂರಕ್ಷಣೆ ಮಾಡಬೇಕು ಎಂದರು.

ಮುಖಂಡ ಸುರೇಶ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ವಿ.ಪಿ. ಕಟ್ಟಿ, ಶಾಲೆ ಮುಖ್ಯಗುರು ಬಿ.ಎಸ್. ಜಾನಕರ, ಎ್ಪಿಎಐ ಸಿಬ್ಬಂದಿ ಸುಮಂಗಲಾ ಬೇನಾಳ, ಎಂ.ಜೆ. ಗಾಯಕವಾಡ, ಸುನೀಲ ರಾಠೋಡ, ವಿಜಯಲಕ್ಷ್ಮೀ ಉಕ್ಕಲಿ, ಜ್ಯೋತಿ ಮಹೀಂದ್ರಕರ, ರಾಘವೇಂದ್ರ ಪೂಜಾರಿ ಇದ್ದರು.

ಬಿ.ಎಸ್. ಬಿರಾದಾರ ಸ್ವಾಗತಿಸಿದರು. ಶತಿ ಮ್ಯಾಗೇರಿ ನಿರೂಪಿಸಿದರು. ಸಂತೋಷ ಲಮಾಣಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net