ಜಾನಪದ ಸಾಹಿತ್ಯಕ್ಕೆ ಸಮಾಜ ಒಗ್ಗೂಡಿಸುವ ಶಕ್ತಿ

5KDR1 (1)
ಅಜ್ಜಂಪುರದ ಬಗ್ಗವಳ್ಳಿಯಲ್ಲಿ ನಡೆದ ಶ್ರಾವಣ ಸಾಹಿತ್ಯ ಸಂಭ್ರಮ, ಹಿರಿಯ ಜಾನಪದ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮವನ್ನು ಸಾಹಿತಿ ಪುಟ್ಟಸ್ವಾಮಿ ಉದ್ಘಾಟಿಸಿದರು. ಜಿ.ಬಿ.ಸುರೇಶ್, ಡಾ.ಮಾಳೇನಹಳ್ಳಿ ಬಸಪ್ಪ, ಮರುಳಸಿದ್ದಪ್ಪ ಮತ್ತಿತರಿದ್ದರು.
Published on

ಕಡೂರು: ಜಾನಪದ ಸಾಹಿತ್ಯಕ್ಕೆ ಸಮಾಜವನ್ನು ಒಗ್ಗೂಡಿಸುವ ಜತೆಗೆ ಸ್ವಾಸ್ಥ್ಯ ಸಮಾಜ ಕಾಪಾಡುವ ಅಪಾರ ಶಕ್ತಿ ಇದೆ ಎಂದು ರಾಷ್ಟ್ರ ಪ್ರಶಸ್ತಿ ವಿಜೇತ ಸಾಹಿತಿ ಪುಟ್ಟಸ್ವಾಮಿ ಹೇಳಿದರು.
ಅಜ್ಜಂಪುರ ತಾಲೂಕಿನ ಬಗ್ಗವಳ್ಳಿ ಗ್ರಾಮದ ಶ್ರೀ ಮೈಲಾರಲಿಂಗೇಶ್ವರ ಸಮುದಾಯ ಭವನದಲ್ಲಿ ಕರ್ನಾಟಕ ಜಾನಪದ ಪರಿಷತ ಆಯೋಜಿಸಿದ್ದ ಶ್ರಾವಣ ಸಾಹಿತ್ಯ ಸಂಭ್ರಮ, ಹಿರಿಯ ಜಾನಪದ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಯಾವುದೇ ಭಾಷೆ ಸಾಹಿತ್ಯ, ನಾಡು ನುಡಿ ಬೆಳೆಯಬೇಕಾದರೆ ಯುವ ಪೀಳಿಗೆ ಸಾಹಿತ್ಯ,ಕವಿತೆ, ಕವನ, ಕಾದಂಬರಿ ಬರೆಯುವುದನ್ನು ರೂಢಿಸಿಕೊಳ್ಳಬೇಕು. ಹೆಚ್ಚು ಹೆಚ್ಚು ಓದುವುದನ್ನು ಮೈಗೂಡಿಸಿಕೊಳ್ಳಬೇಕಿದೆ ಎಂದರು.
ಅಜ್ಜಂಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಡಣಾಯಕಪುರ ರಾಜಣ್ಣ ಮಾತನಾಡಿ, ಜಾನಪದ ಸಾಹಿತ್ಯಕ್ಕೆ ಸಂಸ್ಕೃತಿಗೆ ಮನುಷ್ಯನ ಭಾವನೆಗಳನ್ನು ವ್ಯಕ್ತಪಡಿಸುವ ಶಕ್ತಿ ಅಡಗಿದೆ ಎಂದರು.
ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಜಿ.ಬಿ ಸುರೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಪಠ್ಯ ಪುಸ್ತಕ ಓದುವಿಕೆಗೆ ಮಾತ್ರ ಸೀಮಿತವಾಗಿರದೆ, ದಾರ್ಶನಿಕರ, ಜನಪದ ಸಾಹಿತಿಗಳ, ಕನ್ನಡ ನಾಡು-ನುಡಿಗೆ ಹೋರಾಡಿದ ಮಹನೀಯರ ಗ್ರಂಥ ಸಾಹಿತ್ಯಗಳನ್ನು ಹೆಚ್ಚು ಹೆಚ್ಚು ಓದಬೇಕಿದೆ. ಇದರಿಂದ ಇಂದಿನ ಯುವಸಮೂಹ ಮನ ಪರಿವರ್ತನೆಯಾಗಿ ಸ್ವಾಸ್ಥ್ಯ ಸಮಾಜ ಕಾಪಾಡಲು ಅಪಾರ ಜ್ಞಾನ ಭಂಡಾರ ಒದಗಿದಂತಾಗುತ್ತದೆ ಎಂದರು.
ಹಿರಿಯ ಜಾನಪದ ಕಲಾವಿದರನ್ನು ಸನ್ಮಾನಿಸಲಾಯಿತು. ಹಿರಿಯ ಜಾನಪದ ಕಲಾವಿದ ಡಾ. ಮಾಳೇನಳ್ಳಿ ಬಸಪ್ಪ , ಮರುಳುಸಿದ್ದಪ್ಪ, ಜಿ.ಎಸ್‌ತಿಪ್ಪೇಶ್, ಕಡೂರು ತಾಲೂಕು ಅಧ್ಯಕ್ಷ ಜಗದೀಶ್‌ಆಚಾರ್, ಓಂಕಾರಪ್ಪ, ನಾರಾಯಣಪುರ ರಾಜಣ್ಣ, ಸೋಮಣ್ಣ, ತಿಪ್ಪೇಶಪ್ಪ, ಸಿದ್ದರಾಮಪ್ಪ, ಶಿವಾನಂದಯ್ಯ, ತಿಪ್ಪೇಶ್, ಗುರುಮೂರ್ತಿ, ಜಯಣ್ಣ, ಲಿಂಗರಾಜು ಹಾಗೂ ಭಜನಾ ಮಂಡಳಿ ಮಹಿಳಾ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net