

ಮುಳಬಾಗಿಲು: ನಗರ ಹೊರವಲಯದ ನರಸಿಂಹತೀರ್ಥ ಬಳಿ ಮತ್ತು ತಾಲೂಕಿನ ಎನ್. ವಡ್ಡಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ&75ರಲ್ಲಿ ನಿತ್ಯ ಟ್ರಾಫಿಕ್ ಜಾಮ್ ಉಂಟಾಗುತ್ತಿದ್ದು, ವಾರಾಂತ್ಯದಲ್ಲಿ ಹೆಚ್ಚಿನ ರೀತಿಯಲ್ಲಿ ಸಂಚಾರ ಸಿಕ್ಕು ಉಂಟಾಗುತ್ತಿದ್ದು, ಪ್ರಯಾಣಿಕರು ತಾಸುಗಟ್ಟಲೆ ಪರದಾಡುವ ಪರಿಸ್ಥಿತಿ ಉಂಟಾಗಿದೆ.
ರಾಷ್ಟ್ರೀಯ ಹೆದ್ದಾರಿಯ ಮುಂದುವರಿದ ಅಭಿವೃದ್ಧಿ ಕಾಮಗಾರಿಯಲ್ಲಿ ಈ ಎರಡು ಸ್ಥಳದಲ್ಲಿ ಒಳಸೇತುವೆ ಕಾಮಗಾರಿ ಆರಂಭಿಸಿ 3 ವರ್ಷವಾದರೂ ಕುಂಠಿತಗೊಂಡಿದ್ದು, ರಸ್ತೆಯ ಎರಡು ಬದಿ ಸರ್ವೀಸ್ ರಸ್ತೆ ನಿರ್ಮಿಸಿದ್ದು, ಇದು ಹಳ್ಳಕೊಳ್ಳಗಳಿಂದ ಕೂಡಿದೆ. ಭಾನುವಾರ ಸಂಜೆ ಆಂಧ್ರದ ಬಾಯಿಕೊಂಡ ಗಂಗಮ್ಮದೇವಾಲಯಕ್ಕೆ ಹೋಗಿ ಬರುವ ಭಕ್ತರು ಹಾಗೂ ವಾರಾಂತ್ಯದಲ್ಲಿ ಆಂಧ್ರಪ್ರದೇಶದ ತಿರುಪತಿ ಮತ್ತು ಇತರ ಕಡೆ ತೆರಳಿರುವ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಬೆಂಗಳೂರಿಗೆ ವಾಪಸ್ ಆಗುವ ಕಾರಣ ಸಂಚಾರ ದಟ್ಟಣೆ ಹೆಚ್ಚಾಗಿದ್ದರಿಂದ ನೂರಾರು ವಾಹನಗಳು ಕೇವಲ 10 ರಿಂದ 20 ಕಿ. ಮೀ. ವೇಗದಲ್ಲಿ ಚಲಿಸುವಂತಾಗಿದೆ. ಇದರಿಂದ ಕೆಲವೇ ಕಿ.ಮೀ.ಕ್ರಮಿಸಲು ಸುಮಾರು ಎರಡು ತಾಸು ಹಿಡಿಯುತ್ತಿದೆ. ಜತೆಗೆ ರಸ್ತೆ ತುಂಬಾ ಗುಂಡಿಗಳೇ ಇದ್ದು, ಹೆದ್ದಾರಿಯೋ ಅಥವಾ ಯಮದಾರಿಯೋ ಎಂಬುದನ್ನು ಅಧಿಕಾರಿಗಳೇ ಸ್ಪಷ್ಟಪಡಿಸಬೇಕಿದೆ.
ಅಧಿಕಾರಿಗಳ ನಿರ್ಲಕ್ಷ್ಯ: ದೂರದ ಪಶ್ಚಿಮ ಬಂಗಾಳ, ಒರಿಸ್ಸಾ, ತಮಿಳುನಾಡಿನ ಚೆನ್ನೆ$, ಆಂಧ್ರದಪ್ರದೇಶದ ನಲ್ಲೂರು, ತಿರುಪತಿ, ಚಿತ್ತೂರು ಮತ್ತಿತರ ಕಡೆಗಳಿಂದ ಭಾರಿ ವಾಹನಗಳು, ಲಾರಿ ಬಸ್ಗಳು, ಗೂಡ್ಸ್ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಬೆಂಗಳೂರಿಗೆ ಈ ಮೂಲಕವೇ ಬರಬೇಕಾಗಿದ್ದು, ಇಂತಹ ರಸ್ತೆಯಲ್ಲೆ ಇಷ್ಟೊಂದು ಸಮಸ್ಯೆ ಕಾಡುತ್ತಿದ್ದರೂ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕಣ್ಣಿದ್ದರು ಕುರುಡಾಗಿ ವರ್ತನೆ ಮಾಡುತ್ತಿರುವುದರಿಂದ ಹಿಡಿಶಾಪ ಹಾಕಿಕೊಂಡೇ ಓಡಾಡುವ ದುಸ್ಥಿತಿ ಬಂದೊದಗಿದೆ.
ಸಮಸ್ಯೆಬಗ್ಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸದ ಕಾರಣ ವಿಜಯವಾಣಿಯಲ್ಲಿ ಹೆದ್ದಾರಿ ಸಮಸ್ಯೆ ಬಗ್ಗೆ ಹಲವು ಬಾರಿ ವರದಿ ಮಾಡಿದ್ದರೂ ಸರ್ಕಾರ ನಿದ್ದೆಯಿಂದ ಎಚ್ಚರಗೊಂಡಿಲ್ಲ. ಸಮಸ್ಯೆಗಳ ಬಗ್ಗೆ ಇನ್ನಾದರೂ ಗಮನ ಹರಿಸಬೇಕು.ರಾಮಕಿಶೋರ್ಸಾಮಾಜಿಕ ಕಾರ್ಯಕರ್ತ, ನಂಗಲಿ, ಮುಳಬಾಗಿಲುಹೆದ್ದಾರಿಯಲ್ಲಿ ಪ್ರಯಾಣಿಕರು ಗುತ್ತಿಗೆದಾರರು ಮತ್ತು ಅಧಿಕಾರಿಗಳಿಗೆ ಹಾಗೂ ಸ್ಥಳಿಯ ಸರ್ಕಾರಕ್ಕೆ ನಿತ್ಯ ಶಾಪ ಹಾಕುತ್ತಿದ್ದಾರೆ. ಜತೆಗೆ ಸ್ಥಳಿಯರು ವ್ಯವಸ್ಥೆ ವಿರುದ್ಧ ತಿರುಗಿ ಬೀಳುವ ಮೊದಲು ಜಿಲ್ಲಾಡಳಿತ ಎಚ್ಚರವಹಿಸಿ ಸಮಸ್ಯೆ ಪರಿಹಾರಕ್ಕೆ ತಣ ಮುಂದಾಗಬೇಕು.ಕೆ.ಅಮರೇಶ್ಮುಳಬಾಗಿಲು