

ಬೈಲಹೊಂಗಲ: ಪಟ್ಟಣದ ಕುಡಸೋಮಣ್ಣವರ ಗಲ್ಲಿಯ ಗ್ರಾಮದೇವತೆಯರಾದ ದ್ಯಾಮವ್ವ, ದುರ್ಗವ್ವ ದೇವಿಯರಿಗೆ ಉಡಿ ತುಂಬುವ ಕಾರ್ಯಕ್ರಮ ಜೂ. 10ರಿಂದ 14ರ ವರೆಗೆ ವಿಜಂಭಣೆಯಿಂದ ಜರುಗಲಿದೆ ಎಂದು ಗ್ರಾಮದೇವಿ ದೇವಸ್ಥಾನ ಕಮಿಟಿ ಅಧ್ಯ ಸಣ್ಣಬಸಪ್ಪ ಕುಡಸೋಮಣ್ಣವರ ಹೇಳಿದರು.
ದೇವಸ್ಥಾನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಸಮದ್ಧ ಮಳೆ, ಬೆಳೆ, ನಾಡಿನ ಸುಖ, ಶಾಂತಿಗಾಗಿ ಗ್ರಾಮದೇವಿಯರಿಗೆ ಉಡಿತುಂಬುವ ಕಾರ್ಯಕ್ರಮ ಜರುಗಲಿದೆ. 10ರಂದು ಮಧ್ಯಾಹ್ನ ದೇವಸ್ಥಾನದ ಹತ್ತಿರದ ಮಲ್ಲಿಕಾರ್ಜುನ ಕಲ್ಯಾಣ ಮಂಟಪದಲ್ಲಿ ಮಹಾಪ್ರಸಾದ ಜರುಗಲಿದೆ. ಎಲ್ಲರೂ ದೇವರ ದರ್ಶನ ಮಾಡಬೇಕು ಎಂದು ಮನವಿ ಮಾಡಿದರು.
ದೇವಸ್ಥಾನ ಕಮಿಟಿ ಉಪಾಧ್ಯ ಸುರೇಶ ಅಂಗಡಿ, ಸದಸ್ಯರಾದ ಸುರೇಶ ಹೊಸಮನಿ, ಮಹಾಂತೇಶ ಹರಕುಣಿ, ಶ್ರೀಶೆಲ ಯಡಳ್ಳಿ, ಮುರುಳಿಧರ ಬಡಿಗೇರ, ಉಮೇಶ ಬಡಿಗೇರ, ಸುರೇಶ ಕುಡಸೋಮಣ್ಣವರ, ಮಂಜುನಾಥ ಬಡಿಗೇರ, ಅರುಣ ಯಡಳ್ಳಿ, ಮಹಾಬಳೇಶ್ವರ ಯಡಳ್ಳಿ ಇತರರು ಇದ್ದರು.